- ಕಿಚ್ಚ ಸುದೀಪ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳು
- ಮಾಣಿಕ್ಯನ ಭೇಟಿ ಮಾಡಿದ ಸಂದೇಶ್ ಪ್ರೊಡಕ್ಷನ್ಸ್ ಮಾಲೀಕರು
- ಸಂದೇಶ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಬಾದ್ಷಾ ಸಿನಿಮಾ ಮಾಡೋದು ಖಚಿತ
ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ವಿಕ್ರಾಂತ್ ರೋಣ ಚಿತ್ರ ಆದ್ಮೇಲೆ ಮ್ಯಾಕ್ಸ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರೋ ಅಭಿನಯ ಚಕ್ರವರ್ತಿ, ಇತ್ತೀಚೆಗಷ್ಟೇ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ನೆಕ್ಸ್ಟ್ ಯಾವ್ ಪ್ರಾಜೆಕ್ಟ್ ಕೈ ಗೆತ್ತಿಕೊಳ್ತಾರೆ? ಬಾದ್ಷಾ ಕಿಚ್ಚಗೆ ನೆಕ್ಸ್ಟ್ ಯಾರು ಡೈರೆಕ್ಟ್ ಮಾಡ್ತಾರೆ ಅಂತ ಎದುರು ನೋಡ್ತಿರುವಾಗಲೇ ಸಂದೇಶ್ ಪ್ರೊಡಕ್ಷನ್ಸ್ ಮಾಲೀಕರು ಮಾಣಿಕ್ಯನ ಭೇಟಿ ಮಾಡಿದ್ದಾರೆ.
![](https://guaranteenews.com/wp-content/uploads/2024/05/WhatsApp-Image-2024-05-31-at-1.16.39-PM-768x1024.jpeg)
ಕಳೆದೊಂದು ತಿಂಗಳ ಹಿಂದೆ ಕಿಚ್ಚ ಸುದೀಪ್ರನ್ನ ಸಂದೇಶ್ ನಾಗರಾಜ್ ಅವ್ರು ಭೇಟಿ ಮಾಡಿದ್ದರು. ಆಗಲೇ ಸಂದೇಶ್ ಪ್ರೊಡಕ್ಷನ್ಸ್ ಜೊತೆ ಕಿಚ್ಚ ಕೈ ಜೋಡಿಸಿದ್ರಾ ಎನ್ನುವ ಪ್ರಶ್ನೆ ಮೂಡಿತ್ತು. ಇದೀಗ ಅಪ್ಪ-ಮಗ ಇಬ್ಬರು ಮಾಣಿಕ್ಯನ ಮನೆಗೆ ಭೇಟಿಕೊಟ್ಟು ಮಾತುಕತೆ ನಡೆಸಿ ಫೋಟೋ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಫೆಂಟ್ಯಾಸ್ಟಿಕ್ ನ್ಯೂಸ್ವೊಂದನ್ನ ಶೀಘ್ರದಲ್ಲೇ ರಿವೀಲ್ ಮಾಡ್ತೀವಿ ವೇಯ್ಟ್ ಮಾಡಿ ಅಂತ ನಿರ್ಮಾಪಕ ನಾಗರಾಜ್ ತಿಳಿಸಿದ್ದಾರೆ. ಹೀಗಾಗಿ, ಸಂದೇಶ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಬಾದ್ಷಾ ಸಿನಿಮಾ ಮಾಡೋದು ಖಚಿತವಾಗ್ತಿದೆ. ಅಧಿಕೃತವಾಗಿ ನಿರ್ಮಾಪಕರೇ ಅನೌನ್ಸ್ ಮಾಡಲಿದ್ದಾರೆ.
![](https://guaranteenews.com/wp-content/uploads/2024/05/WhatsApp-Image-2024-05-31-at-1.16.39-PM-1-1024x685.jpeg)
ಅಚ್ಚರಿ ಅಂದರೆ ಈಗಾಗಲೇ ಕಿಚ್ಚ ಐದು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸತ್ಯಜ್ಯೋತಿ ಫಿಲಂಸ್ ಹಾಗೂ ಕೆಆರ್ಜಿ ಸ್ಟುಡಿಯೋಸ್ಗೆ ಮಾಲೀಕರಿಗೆ ಕಾಲ್ಶೀಟ್ ಕೊಟ್ಟಿದ್ದಾರೆ. ಇತ್ತ ವಿಕ್ರಾಂತ್ ರೋಣ ನಿರ್ದೇಶಕರ ಬಿಲ್ಲಾ ರಂಗ ಬಾಷಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ನಡುವೆ ಕಬ್ಜ-2ನಲ್ಲೂ ಕಿಚ್ಚ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಬಹುನಿರೀಕ್ಷಿತ ಮ್ಯಾಕ್ಸ್ ಮುಗಿಸಿಕೊಟ್ಟಿರೋ ಮಾಣಿಕ್ಯ, ಡೈರೆಕ್ಟರ್ ಚೇರನ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾ ಅಖಾಡಕ್ಕೆ ಧುಮ್ಕಲಿದ್ದಾರಂತೆ.
ಚೇರನ್ ತಮಿಳಿನ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಪ್ಲಸ್ ಗೀತರಚನೆಕಾರ ಕೂಡ ಹೌದು. ಹಲವು ಸೂಪರ್ ಹಿಟ್ ಸಿನ್ಮಾ ಕೊಟ್ಟಿರೋ, ನ್ಯಾಷನಲ್ ಅವಾರ್ಡ್ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡಿರುವ ಚೇರನ್ ಈಗ ಸ್ಯಾಂಡಲ್ವುಡ್ ಹೆಬ್ಬುಲಿಗೆ ಫ್ರೇಮ್ ಇಡಲು ಉತ್ಸುಕರಾಗಿದ್ದಾರೆ.ಈ ಹಿಂದೆ ಕಿಚ್ಚ ಚೇರನ್ ಡೈರೆಕ್ಟ್ ಮಾಡಿದ್ದ ಆಟೋಗ್ರಾಫ್ ಸಿನಿಮಾದ ರೈಟ್ಸ್ ತಂದು ಮೈ ಆಟೋಗ್ರಾಫ್ ಸಿನಿಮಾ ಮಾಡಿ ದಿಗ್ವಿಜಯ ಸಾಧಿಸಿದ್ದರು. ಇದೀಗ ಅದೇ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿ, ಈ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ. ಸಿನಿಮಾಗಾಗಿ ಬಾದ್ಷಾ ಫ್ಯಾನ್ಸ್ ಚಾತಕ ಪಕ್ಷಿಯಂತೆ ಕಾಯೋ ಥರ ಆಗಿದೆ.