ಪುನೀತ್ ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಯುವರತ್ನದ ನಿರ್ದೇಶಕ ಸಂತೋಷ್ ಆನಂದ್ರಾಮ್ ಇತ್ತೀಚೆಗೆ ಅವ್ರ ಅಭಿಮಾನಿಗೆ. ಪುನೀತ್ ರಾಜ್ಕುಮಾರ್ ಅವ್ರು ಯುವರತ್ನ ಸಿನಿಮಾದಲ್ಲಿ ತೊಟ್ಟಿದ್ದ ಉಡುಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪವರ್ ಸ್ಟಾರ್ ಅಭಿನಯದ ೨೯ನೇ ಸಿನಿಮಾ ಯುವರತ್ ಆಗಿತ್ತು. ಇದನ್ನೇ ಸೂಚಿಸುವ ನಂಬರ್ ಅನ್ನು ಈ ಟೀಶರ್ಟ್ ಮೇಲೆ ಮುದ್ರಿಸಲಾಗಿತ್ತು. ಇದೇ ಟೀಶರ್ಟ್ ತೊಟ್ಟು ರಗ್ಬಿ ಆಡುವ ಅಪ್ಪುವನ್ನು ಟೀಸರ್ ರೂಪದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು ಸಿನಿಮಾ ಟೀಮ್. ಇದೇ ರಗ್ಬಿ ಸೀನ್ ಸಿನಿಮಾದಲ್ಲೂ ಇತ್ತು.
ಪುನೀತ್ ರಾಜ್ಕುಮಾರ್ ತೊಟ್ಟ ಈ ವಿಶೇಷ ರೆಡ್ ಟೀಶರ್ಟ್ ಪಡೆದ ಅಪ್ಪು ಅಭಿಮಾನಿ, ತುಂಬಾನೇ ಖುಷಿಯಿಂದ ಸಂತೋಷ್ ಆನಂದ್ರಾಮ್ ಅವ್ರಿಗೆ ಧನ್ಯವಾದ ಹೇಳಿದ್ದಾರೆ. ತಾನು ಬದುಕಿರೋವರೆಗೂ ಈ ಬಟ್ಟೆಯನ್ನ ತಮ್ಮ ಜೊತೆಯಲ್ಲೇ ಇಟ್ಟುಕೊಳ್ಳುತ್ತೇನೆ ಅಂತ ಹೇಳಿದ್ದಾರೆ.
ಇದೇ ರೀತಿ ಸಿನಿಮಾದಲ್ಲಿ ಅಪ್ಪು ಬಳಸಿದ್ದ ಬೈಕ್ ಅನ್ನೂ ಕೂಡ ಅವ್ರ ಅಭಿಮಾನಿಗಳಿಗೆ ಒಂದು ವಿಶೇಷ ಸಂದರ್ಭದಲ್ಲಿ ನೀಡುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕರು. ಅಪ್ಪು ಅಭಿಮಾನಿಯಾಗಿ ಈ ಗಿಫ್ಟ್ ಪಡೆದ ಆಂಜಿ, ಇದು ನನ್ನ ಲೈಫ್ನ ಮರೆಯಲಾಗದ ಕ್ಷಣ ಎಂದಿದ್ದಾರೆ.