ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡದ ಹುಡುಗರ ಹಾಟ್ ಫೇವರಿಟ್ ಆಗಿ ಕನ್ನಡಕ್ಕೆ ಬಂದ ಪಂಜಾಬಿ ಬೆಡಗಿ ಪೂಜಾಗಾಂಧಿ, ಬಹುಬೇಗ ಕನ್ನಡದ ಮನೆಮಾತಾದರು, ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ ಪೂಜಾ, ರಾಜಕೀಯದಲ್ಲೂ ಒಂದೂ ಕೈ ನೋಡೋಕೆ ಮುಂದಾದರು. ಅಲ್ಲೂ ನೆಲೆ ನಿಲ್ಲೋಕೆ ಸೇಣೆಸಾಡಿ ತೆರೆ ಮರೆಗೆ ಸರಿದ್ದಿದ್ದರು.
ಕೆಲವು ತಿಂಗಳುಗಳ ಹಿಂದೇ ಕನ್ನಡ ಕಲಿತು ಅಪ್ಪಟ ಕನ್ನಡತಿಯಂತೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದರು. ನಂತ್ರ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರೂ. ಇಷ್ಟಾದರೂ ಸಿನಿಮಾ ಹಾಗೂ ರಾಜಕೀಯವಾಗಿ ಹೊಸ ಸುದ್ದಿ ನೀಡದ ಪೂಜಾ ಮೇಡಂ. ಟಿವಿ ಸೀರಿಯಲ್ ನಲ್ಲಿ ಪ್ರತ್ಯಕ್ಷವಾಗಿದ್ದರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿರುವ ನಿನಗಾಗಿ ಸೀರಿಯಲ್ ನಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ. ಸಿನಿಮಾ ನಟಿಯ ಲೈಫ್ ಸ್ಟೋರಿ ಹೇಳುವ ಸೀರಿಯಲ್ನಲ್ಲಿ ಶ್ರೀಮತಿ ತಶ್ವಿನಿ ಪ್ರಕಾಶ್ ಪಾತ್ರದಲ್ಲಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ಪೂಜಾಗಾಂಧಿ ಕಾಣಿಸಿಕೊಂಡಿದ್ದು. ಸೀರಿಯಲ್ ನಲ್ಲಿ ಮುಂದುವರಿತಾರ ಅನ್ನೋದಿನ್ನು ಕನ್ಫರ್ಮ್ ಆಗಿಲ್ಲ.
ಈ ನಡುವೆ ಪೂಜಾ ಗಾಂಧಿ ಅವರ ಹೊಸ ಲುಕ್ ಹೆಚ್ಚು ವೈರಲ್ ಆಗಿದೆ. ಸೀರಿಯಲ್ ಗಾಗಿ ಹೇರ್ ಸ್ಟೈಲ್ ಸಂಪೂರ್ಣವಾಗಿ ಬದಲಾಯಿಸಿರುವ ಪೂಜಾಗಾಂಧಿ, ಸೀರಿಯಲ್ ಪ್ರಪಂಚಕ್ಕೆ ಫ್ರೆಶ್ ಎಂಟ್ರಿ ಕೊಡ್ತಿದ್ದಾರೆ. ಈ ವಾರ ಪ್ರಸಾರವಾಗುವ ನಿನಗಾಗಿ ಸೀರಿಯಲ್ ನಲ್ಲಿ ಪೂಜಾ ಗಾಂಧಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.