ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹೀಟ್ ಸ್ಟ್ರೋಕ್ನಿಂದ ಬಳಲುತ್ತಿದ್ದು, ಅಹಮದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿರುವ ಸುದ್ದಿ ಹೊರಬಿದ್ದಿತ್ತು. ಬಾಲಿವುಡ್ ಬಾದ್ ಷಾ ಅಭಿಮಾನಿಗಳನ್ನ ಆತಂಕ್ಕೀಡು ಮಾಡಿತ್ತು. ಇದೀಗ ಕಿಂಗ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಹಮದಾಬಾದ್ನಲ್ಲಿ ಸಾಕಷ್ಟು ಸೆಖೆ ಇದೆ. ಈ ಕಾರಣಕ್ಕೆ ಅವರಿಗೆ ಸನ್ ಸ್ಟ್ರೋಕ್ ಆಗಿರಬಹುದು ಎಂದು ಹೇಳಲಾಗ್ತಿತ್ತು..
ಆದ್ರೆ ಶಾರುಖ್ ಗೆ ಸನ್ ಸ್ಟ್ರೋಕ್ ಆಗಿರಲಿಲ್ಲವಂತೆ . ಬದಲಾಗಿ ವೈರಲ್ ಫೀವರ್ ಆಗಿತ್ತಂತೆ. ಆದ್ರೀಗ ಆರೋಗ್ಯದಲ್ಲಿ ಸುಧಾರಣೆ ಆಗಿದ್ದು ಡಿಸ್ಚಾರ್ಜ್ ಮಾಡಲಾಗಿದೆ. ಹಾಗೂ ಮುಂಬೈ ಗೆ ವಾಪಾಸ್ ಆಗಿದ್ದಾರೆ ಅನ್ನೋ ಮಾಹಿತಿ ಇದೆ ..
ಇನ್ನೂ ನಟಿ ಹಾಗೂ ಕೆಕೆಆರ್ನ ಸಹ ಮಾಲೀಕರಾದ ಜೂಹಿ ಚಾವ್ಲಾ ಆಸ್ಪತ್ರೆಗೆ ತೆರಳಿ ಶಾರುಖ್ ಖಾನ್ ಆರೋಗ್ಯ ವಿಚಾರಿಸಿದ್ರು. ಸದ್ಯ ಆರೋಗ್ಯ ಸುಧಾರಣೆ ಆಗಿರೋದ್ರಿಂದ ಕಿಂಗ್ ಖಾನ್ ಫೈನಲ್ ಮ್ಯಾಚ್ ಗೆ ಹಾಜರಾಗಲಿದ್ದಾರೆ.