ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದು, ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡಿದ್ದು, ಇಂದು ಉತ್ಸಾಹದಿಂದ ಓಡಾಡುತ್ತಿದ್ದಾರೆ.
ಶಿವಣ್ಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಅಮೆರಿಕಾದಲ್ಲಿ ಕನ್ನಡ ಹಾಡನ್ನು ಹಾಡಿದ್ದಾರೆ. ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು ಎಂದು ಕನ್ನಡ ಹಾಡಿ ಶಿವರಾಜ್ ಕುಮಾರ್ ಸಂತಸ ಪಟ್ಟಿದ್ದಾರೆ. ಈ ವೇಳೆ ಶಿವಣ್ಣನ ಉತ್ಸಾಹ ಕಂಡು ಅವರ ಕುಟುಂಬದವರು ಸಂತೋಷಪಟ್ಟಿದ್ದಾರೆ.
ಪ್ಲೋರೊಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ಮಾಡಿಸಿಕೊಂಡಿದ್ದು, ಇನ್ನೇನು ಜನವರಿ 24ಕ್ಕೆ ಭಾರತಕ್ಕೆ ಬರಲಿದ್ದಾರೆ. ಅಮೆರಿಕಾದ ಪ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ನಟ ಶಿವರಾಜ್ಕುಮಾರ್ ಅವರಿಗೆ ಸರ್ಜರಿ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಶಿವಣ್ಣ ಅವರ ಫ್ಯಾಮಿಲಿ ಅವರ ಪ್ರೀತಿಯ ಪೆಟ್ ಡಾಗ್ ನಿಮೋವನ್ನು ಕಳೆದುಕೊಂಡಿದ್ದರು. ಕುಟುಂಬದ ಭಾಗವಾಗಿದ್ದ ನಿಮೋ ತೀರಿಕೊಂಡಿರುವ ವಿಚಾರವನ್ನು ಗೀತಾ ಶಿವರಾಜ್ಕುಮಾರ್ ಅವರು ತಿಳಿಸಿದ್ದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc