ಕಳೆದ ವರ್ಷ ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ತೆರೆಕಂಡು ಬಾಕ್ಸ್ ಆಫೀಸ್ ದೋಚಿದ ಸಿನಿಮಾಗಳ ಪೈಕಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ಘೋಸ್ಟ್ ಕೂಡ ಒಂದು. ಬೀರ್ಬಲ್ ಖ್ಯಾತಿಯ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಂತಹ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಘೋಸ್ಟ್ನಲ್ಲಿ ಶಿವಣ್ಣ ಡ್ಯುಯೆಲ್ ರೋಲ್ ಪ್ಲೇ ಮಾಡಿದ್ದರು. ಮಾಸ್ ಲೀಡರ್ ಶಿವಣ್ಣನ ಗ್ಯಾಂಗ್ಸ್ಟರ್ ಲುಕ್ಕಿಗೆ, ಬಿಗ್ ಡ್ಯಾಡಿ ರೋಲ್ಗೆ ದೊಡ್ಮನೆ ಅಭಿಮಾನಿಗಳು ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳು ಥ್ರಿಲ್ಲಾಗಿದ್ದರು. ಪ್ಯಾನ್ ಇಂಡಿಯಾ ತುಂಬೆಲ್ಲಾ ಘೋಸ್ಟ್ನ ರೀಚ್ ಮಾಡಿಸುವಲ್ಲಿ ಸಂದೇಶ್ ಪ್ರೊಡಕ್ಷನ್ಸ್ ಮಾಲೀಕರು ಕೂಡ ಗೆದ್ದಿದ್ದರು. ಇದೀಗ ಅದೇ ಮಾಲೀಕರಿಗೆ ಕರುನಾಡ ಚಕ್ರವರ್ತಿ ಮತ್ತೊಮ್ಮೆ ಕಾಲ್ಶೀಟ್ ನೀಡಿದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕ ಸಂದೇಶ್ ಅವರು ಶಿವರಾಜ್ಕುಮಾರ್ ಅವ್ರನ್ನ ಭೇಟಿ ಮಾಡಿದ್ದು, ಅಪ್ಕಮ್ಮಿಂಗ್ ಪ್ರಾಜೆಕ್ಟ್ ಕುರಿತು ಚರ್ಚಿಸಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಅಷ್ಟಕ್ಕೂ, ನಿರ್ಮಾಪಕ ಸಂದೇಶ್ ಅವ್ರು ಶಿವಣ್ಣನ ಜೊತೆ ಚರ್ಚೆ ಮಾಡಿದ್ದು ಘೋಸ್ಟ್ ಸೀಕ್ವೆಲ್ಲಾ ಬಗ್ಗೆನಾ ಅಥವಾ ಬೇರೆ ಸಿನಿಮಾದ ಕುರಿತಾದ ಚರ್ಚೆನಾ? ಈ ಕುತೂಹಲಕ್ಕೆ ಉತ್ತರ ಕೊಟ್ಟಿಲ್ಲ. ಬಟ್, ಘೋಸ್ಟ್ ಬ್ಲಾಕ್ಬಸ್ಟರ್ ಹಿಟ್ ಆದ್ಮೇಲೆ ಪಾರ್ಟ್-2 ಮಾಡ್ತಾರೆಂದು ಸುದ್ದಿಯಾಗಿತ್ತು. ಡೈರೆಕ್ಟರ್ ಶ್ರೀನಿ ಕೂಡ ಪಾರ್ಟ್ 2 ಸುಳಿವು ಕೊಟ್ಟಿದ್ದರು. ಸುದ್ದಿಗೋಷ್ಠಿಯಲ್ಲಿ ಆ ಬಗ್ಗೆ ಹೇಳಿಕೊಂಡಿದ್ದರು. ಆದ್ರೀಗ ನಿರ್ದೇಶಕ ಶ್ರೀನಿವಾಸ್ ಅವ್ರು ಬೀರ್ಬಲ್-2 ಮಾಡಲು ಹೊರಟಿದ್ದಾರೆ. ಸ್ಕ್ರಿಪ್ಟ್ ರೆಡಿಯಿದೆ, ಶೀಘ್ರದಲ್ಲೇ ಶೂಟಿಂಗ್ ಹೊರಡ್ತೇವೆ ಎಂತಲೂ ಹೇಳಿಕೊಂಡಿದ್ದಾರೆ. ಹೀಗಾಗಿ, ಘೋಸ್ಟ್ ಪಾರ್ಟ್2 ಗೂ ಮೊದಲು ಶ್ರೀನಿವಾಸ್ ಅವರು ಬೀರ್ಬಲ್2 ಮುಗಿಸಲಿದ್ದಾರೆ ಅನ್ನೋದು ಖಚಿತವಾಗಿದೆ.
ಸದ್ಯ ಶಿವಣ್ಣ ಕೂಡ ಭೈರತಿ ರಣಗಲ್ , ಉತ್ತರಕಾಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೈಲರ್ ನಂತರ ಪರಭಾಷಾ ಸಿನಿಮಾಗಳಿಂದಲೂ ಬುಲಾವ್ ಬರ್ತಿದ್ದು ಈಗಾಗಲೇ ರಾಮ್ಚರಣ್ ಸಿನಿಮಾಗೆ ಓಕೆ ಹೇಳಿದ್ದಾರೆ. ಬುಚ್ಚಿಬಾಬು ಸನಾ ಡೈರೆಕ್ಟ್ ಮಾಡ್ತಿರೋ ಆರ್ಸಿ-16 ಸಿನಿಮಾದಲ್ಲಿ ಮಗಧೀರ ಹಾಗೂ ಮಾಸ್ ಲೀಡರ್ ಜುಗಲ್ ಬಂಧಿ ನೋಡೋದಕ್ಕೆ ಸಿಗಲಿದೆ. ಈ ಮಧ್ಯೆ ಕನ್ನಡದ ನಿರ್ದೇಶಕರು, ನಿರ್ಮಾಪಕರು ಸೆಂಚುರಿ ಸ್ಟಾರ್ ಜೊತೆ ಸಿನಿಮಾ ಮಾಡೋದಕ್ಕೆ ಮುಗಿಬೀಳ್ತಿದ್ದು ಹಲವರಿಗೆ ಶಿವಣ್ಣ ಕಾಲ್ಶೀಟ್ ಕೊಟ್ಟಿದ್ದಾರೆ. ಅಸುರ, ಚಂದ್ರೋದಯ ನಂತರ ಘೋಸ್ಟ್ ಚಿತ್ರಕ್ಕಾಗಿ ಸಂದೇಶ್ ಪ್ರೊಡಕ್ಷನ್ಸ್ ಜೊತೆ ಶಿವಣ್ಣ ಕೈ ಜೋಡಿಸಿದ್ದರು. ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ಸ್ ಇನ್ನಷ್ಟೇ ಹೊರಬೀಳಬೇಕಿದೆ.