ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಈ ವರ್ಷ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮನವಿ ಮಾಡಿಕೊಂಡಿರೋ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿದ್ದಾರೆ. ಅಷ್ಟಕ್ಕೂ, ಭಜರಂಗಿ ಹುಟ್ಟುಹಬ್ಬ ಆಚರಿಸಲು ನಿರಾಕರಿಸಿರೋದಕ್ಕೆ ಕಾರಣ ಕನ್ನಡ ಚಿತ್ರರಂಗದಲ್ಲಾದ ಬೆಳವಣಿಗೆಗಳು, ಅದರಲ್ಲೂ ಕೊಲೆ ಕೇಸ್ ನಲ್ಲಿ ದರ್ಶನ್ ಬಂಧನವಾಗಿರೋದು ಒಂದು ಕಾರಣ ಅಂದರೆ ಬಹುಷಃ ತಪ್ಪಾಗಲ್ಲ ಅನ್ಸುತ್ರೆ. ಅಷ್ಟಕ್ಕೂ ಶಿವಣ್ಣ ಬರೆದಿರೋ ಲೆಟರ್ನಲ್ಲಿ ಏನಿದೆ ನೀವೇ ನೋಡಿ
ಅಭಿಮಾನಿ ದೇವರುಗಳಿಗೆ
ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀ ರಕ್ಷೆ. ಈ ವರ್ಷ ಬರ್ತ್ ಡೇಗೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ. ಆದರೆ, ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲಬ್ರೇಟ್ ಮಾಡೋಣ. ನಾನು ಬರ್ತ್ ಡೇಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ. ಜುಲೈ 12 ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ
ನಿಮ್ಮ ಆಶೀರ್ವಾದ ಸದಾ ಇರಲಿ – ಶಿವಣ್ಣ
ಹೀಗೆ ಪತ್ರದ ಮೂಲಕ ವಿನಂತಿ ಮಾಡಿಕೊಂಡಿರೋ ಶಿವಣ್ಣ, ಈ ವರ್ಷ ಫ್ಯಾಮಿಲಿ- ಫ್ರೆಂಡ್ಸ್ ಜತೆ ಸಿಂಪಲ್ಲಾಗಿ ಬರ್ತ್ ಡೇ ಆಚರಿಸಿಕೊಳ್ತಿದ್ದಾರೆ. ಜುಲೈ 12 ಅಂದರೆ ನಾಳೆ ಶಿವಣ್ಣ 62 ನೇ ವಸಂತಕ್ಕೆ ಕಾಲಿಡ್ತಿದ್ದಾರೆ.ಈ ವರ್ಷ ದೊಡ್ಮನೆ ದೊರೆ ಹುಟ್ದಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಬರ್ತ್ ಡೇ ಗೆ ಬ್ರೇಕ್ ಹಾಕಿರೋದು ಸೆಂಚುರಿ ಸ್ಟಾರ್ ಫ್ಯಾನ್ಸ್ ನಿರಾಸೆಗೊಳ್ಳುವಂತೆ ಮಾಡಿದೆ. ಆದರೆ, ಐದಾರು ಸಿನಿಮಾಗಳ ಅಪ್ಡೇಟ್ ಸಿಗ್ತಿರೋದು, ಟೀಸರ್, ಟ್ರೇಲರ್, ಹಾಡುಗಳು ಗಿಫ್ಟಾಗಿ ಸಿಗ್ತಿರೋದು ಹ್ಯಾಟ್ರಿಕ್ ಅಭಿಮಾನಿಗಳನ್ನ ಹುಚ್ಚೇಳುವಂತೆ ಮಾಡಿದೆ
ಹೌದು, ಬಹುನಿರೀಕ್ಷಿತ ಭೈರತಿ ರಣಗಲ್ ಸೇರಿದಂತೆ ಉತ್ತರಕಾಂಡ, ಭೈರವನ ಕೊನೆ ಪಾಠ, 45, ಫೈರ್ ಫ್ಲೈ ಸೇರಿದಂತೆ ಹಲವು ಸಿನಿಮಾ ತಂಡಗಳು ದೊಡ್ಮನೆ ದೊರೆ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡುತ್ತಿವೆ. ಹೀಗಾಗಿ, ಶಿವಣ್ಣನ ಅಭಿಮಾನಿಗಳು ಕಾತುರದಿಂದ ಆ ಉಡುಗೊರೆನಾ ಕಣ್ಣಿಗೆ ಹೊತ್ತಿಕೊಳ್ಳಲು ಎದುರುನೋಡ್ತಿದ್ದಾರೆ. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಮಾಸ್ ಲೀಡರ್ ಬರ್ತ್ ಡೇ ಸರ್ ಪ್ರೈಸ್ ಆಗಿ ಗಿಫ್ಟ್ ಗಳು ಸಿಗುತ್ತೆ.ಯಾವ್ಯಾವ ತಂಡ ಏನೇನು ಗಿಫ್ಟ್ ಕೊಟ್ಟು ಅಚ್ಚರಿ ಮೂಡಿಸುತ್ತವೆ ಜಸ್ಟ್ ವೇಯ್ಟ್ ಆಂಡ್ ವಾಚ್