- ಭಾವಿ ಪತಿಗೆ ಹುಟ್ಟುಹಬ್ಬಕ್ಕೆ ಬೀಸ್ಟ್ ಎಕ್ಸ್ಯುವಿ 700 ಕಾರ್ ಗಿಫ್ಟ್ ಕೊಟ್ಟ ಶೋಭಾ ಶೆಟ್ಟಿ
- ಹೊಸ ಕಾರಿನ ಫೋಟೋ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ನಟಿ
ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ನಟಿ ಶೋಭಾ ಶೆಟ್ಟಿ ವೀಕ್ಷಕರ ಗಮನ ಸೆಳೆದಿದ್ದರು. ಕನ್ನಡ ಧಾರಾವಾಹಿಯಲ್ಲಿ ಮಿಂಚಿದ್ದ ಶೋಭಾ ಅವರು ಸದ್ಯ ತೆಲುಗಿ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಗಷ್ಟೇ ನಟಿ ಶೋಭಾ ಶೆಟ್ಟಿ ಅವರು ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಯಶವಂತ್ ರೆಡ್ಡಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಫ್ಯಾನ್ಸ್ಗೆ ಗುಡ್ನ್ಯೂಸ್ ನೀಡಿದ್ದರು. ಇದೀಗ ಶೋಭಾ ಶೆಟ್ಟಿ ಭಾವಿ ಪತಿ ಯಶವಂತ್ ರೆಡ್ಡಿ ಅವರ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ.
ಬೀಸ್ಟ್ ಎಕ್ಸ್ಯುವಿ 700 ಕಾರ್ ಅನ್ನು ಭಾವಿ ಪತಿ ಯಶ್ವಂತ್ ರೆಡ್ಡಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇನ್ನು, ಬೀಸ್ಟ್ ಎಕ್ಸ್ಯುವಿ 700 ಕಾರಿನ ಬೆಲೆ ಬರೋಬ್ಬರಿ 17.71 ಲಕ್ಷದ್ದಾಗಿದೆ. ಸದ್ಯ ಹೊಸ ಕಾರಿನ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋ ನೋಡಿದ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಈಗಾಗಲೇ ನಟಿ ಶೋಭಾ ಹೈದರಾಬಾದ್ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ.
ಕನ್ನಡದ ಹಿಟ್ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಟಿ ಶೋಭಾ ಅಭಿನಯಿಸಿದ್ದರು. ಈ ಧಾರಾವಾಹಿ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.