- ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್ ಮಲ್ಯ
- ನಾನು ಯಾವತ್ತೂ ಅನುಷ್ಕಾ ಜೊತೆ ಡೇಟಿಂಗ್ ಮಾಡಿಲ್ಲ
- ಹಲವು ವರ್ಷಗಳ ವದಂತಿಗಳಿಗೆ ತೆರೆ ಎಳೆದ ಸಿದ್ದಾರ್ಥ್ ಮಲ್ಯ
ವಿವಾದಿತ ಮದ್ಯದ ದೊರೆ ವಿಜಯ್ ಮಲ್ಯ ಅವರ ಪುತ್ರ ಹಾಗೂ ನಟ ಸಿದ್ದಾರ್ಥ್ ಮಲ್ಯ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿದ್ದಾರ್ಥ್ ಮಲ್ಯ ಹಾಗೂ ನಟಿ ಮತ್ತು ಮಾಡೆಲ್ ಜಾಸ್ಮಿನ್ ಅವರನ್ನು ಮದುವೆಯಾಗಿದ್ದು, ಫೋಟೋಗಳು ಸಖತ್ ವೈರಲ್ ಆದವು. ಈ ಜೊಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿ ಕಳೆದ ನವೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ನಟ ಸಿದ್ದಾರ್ಥ್ ಮಲ್ಯ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಆದಾದ ಬಳಿಕ ಅನುಷ್ಕಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ಮದುವೆಯಾದ್ರು. ಅದ್ರೆ ಸಿದ್ದಾರ್ಥ್ ಮಲ್ಯ ಅವರು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ನಡೆಸುತ್ತಿದ್ದ ವಿಷಯವನ್ನು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ನಾನು ಯಾವತ್ತೂ ಅನುಷ್ಕಾ ಜೊತೆ ಡೇಟಿಂಗ್ ಮಾಡಿಲ್ಲ. 2014 ರಲ್ಲಿ ನಾನು ಅನುಷ್ಕಾ ಮತ್ತು ವಿರಾಟ್ ಅನ್ನು ಎರಡು ಬಾರಿ ಪಾರ್ಟಿಗಳಲ್ಲಿ ನೋಡಿದೆ. ಆ ಸಮಯದಲ್ಲಿ ನಾನು ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದೆ, ಆದರೆ ಅನುಷ್ಕಾ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂದು ಹಲವು ವದಂತಿಗಳು ಹಬ್ಬಿದ್ದವು. ನಾನು ದೀಪಿಕಾ ಜೊತೆ ಭಾಗವಹಿಸಿದ್ದ ಪಾರ್ಟಿಗಳಲ್ಲಿ ಅನುಷ್ಕಾ ಕೂಡ ಇದ್ದಳು. ಆದರೆ, ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡಿಲ್ಲ. ಇದು ನಿಜ ಎಂದಿದ್ದಾರೆ ಸಿದ್ಧಾರ್ಥ್. ಈ ಮೂಲಕ ಸಿದ್ಧಾರ್ಥ್ ಹಲವು ವರ್ಷಗಳ ವದಂತಿಗಳಿಗೆ ತೆರೆ ಎಳೆದಿದ್ದಾರೆ.