ರಾಕಿಂಗ್ ಸ್ಟಾರ್ ಯಶ್ ಇವತ್ತು ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಡಿಮ್ಯಾಂಡ್ ಹೇಗ್ ಇದೆ ಅನ್ನೋದನ್ನ ಹೇಳಬೇಕಾಗಿಲ್ಲ. ಹಿಂದಿ ಸಿನಿಮಾ ನಿರ್ಮಾಣ ಮಾಡುವಷ್ಟು ಎತ್ತರಕ್ಕೆ ರಾಕಿ ಭಾಯ್ ಬೆಳದಿದ್ದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ.. ಬಾಲಿವುಡ್ ನಲ್ಲಿ ‘ರಾಮಾಯಣ’ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್... ಇದೇ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ ಅಂತ ಹೇಳಲಾಗುತ್ತಿದೆ. ಯಶ್ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಯಶ್ ರಾತ್ರೋ ರಾತ್ರಿ ಸ್ಟಾರ್ ಆದವರಲ್ಲ. ಅದಕ್ಕೆ ಸಾಕ್ಷಿಯಾಗಿ ಈಗ ಅವರ ಹಳೆಯ ಕ್ಲಿಪ್ ಸಖತ್ ವೈರಲ್ ಆಗುತ್ತಿದೆ….
ಯೆಸ್… ಯಶ್ ಕಿರುತೆರೆ ಮೂಲಕ ಬಣ್ಣದ ಬದುಕನ್ನ ಆರಂಭಿಸಿದವರು. ಸಣ್ಣ ಪುಟ್ಟ ಪಾತ್ರಗಳಿಗಾಗಿಯೂ ಪರದಾಡಿದವರು.. ಆ ನಂತರ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಮಯದಲ್ಲಿ ಯಶ್ ‘ಸಿಲ್ಲಿ ಲಲ್ಲಿ’ಎಂಬ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದರು. ಆಗಾಗ ಕಿರುತೆರೆಯಲ್ಲಿ ಕಾಣಿಸಿಕೊಳ್ತಾಯಿದ್ರು… ಈ ಧಾರಾವಾಹಿಯ ಕ್ಲಿಪ್ಗಳನ್ನ ಈಗ ರಾಕಿಂಗ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಅವರ ಧ್ವನಿ ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ...