- ವೈವಾಹಿಕ ಜೀವನಕ್ಕೆ ಕಾಲಿಟ್ಟ “ಬಿಗ್ಬಾಸ್ ” ಸಿರಿ
- ಬಿಗ್ಬಾಸ್ಗೂ ಮುನ್ನ ಪರಿಚಯವಿದ್ದ ಉದ್ಯಮಿ ಪ್ರಭಾಕರ್
‘ರಂಗೋಲಿ’ ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳಿಂದ ಪ್ರೇಕ್ಷಕರ ಮನಗೆದ್ದ ಸಿರಿ ಈಗ ಮದುವೆಯಾಗಿದ್ದಾರೆ. ಇನ್ನೂ ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆ ಅವರ ಫ್ಯಾನ್ಸ್ನಲ್ಲಿ ಪದೇ ಪದೇ ಕಾಡುತ್ತಿತ್ತು. ಈಗ ಸದ್ದಿಲ್ಲದೇ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಸಿರಿ.
ಸಿರಿ ಅವರಿಗೆ ಮೈತುಂಬ ಅರಿಶಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಮದುವೆಯಾದ ಹುಡುಗ ಪ್ರಭಾಕರ್ ಉದ್ಯಮಿಯಾಗಿದ್ದು, ಇವರು ಮಂಡ್ಯದವರರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೂಲಗಳ ಪ್ರಕಾರ ಬಿಗ್ಬಾಸ್ಗೂ ಮುನ್ನ ಇವರಿಬ್ಬರಿಗೂ ಪರಿಚಯವಿತ್ತು. ಸಿರಿ ಬಿಗ್ಬಾಸ್ನಿಂದ ಹೊರ ಬಂದ ನಂತರ ಅವರ ಕುಟುಂಬದವರ ಜೊತೆ “Well Come Home Siri” ಎಂದು ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.
ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ ಇದಕ್ಕೆ ಸಿರಿ ಉತ್ತರಿಸಿದ್ದಾರೆ.