ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಾಯ್ ಫ್ರೆಂಡ್ ಜಹೀರ್ ಇಕ್ಬಾಲ್ ಅವರನ್ನು ಜೂ.23ರಂದು ವಿವಾಹವಾಗುತ್ತಿದ್ದಾರೆ ಎಂಬ ವಿದಂತಿಗಳು ಕೇಳಿ ಬರುತ್ತಿದ್ದವು. ಇದೆ ಮೊದಲನೇ ಬಾರಿಗೆ ತಂದೆ ಶತ್ರುಘ್ನ ಸಿನ್ಹಾ ಅವರನ್ನು ಸೋನಾಕ್ಷಿಯ ಮದುವೆಯ ಬಗ್ಗೆ ಕೇಳಿದಾಗ ಅವರು ಮದುವೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
ಮದುವೆಗೆ ಕರೆದರೆ ದಂಪತಿಗಳಿಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು. ಸೋನಾಕ್ಷಿಯ ಸಹೋದರ ಲವ್ ಸಿನ್ಹಾ ಕೂಡ ಈ ಮದುವೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ. ಈ ಹೇಳಿಕೆಗಳು ಸೋನಾಕ್ಷಿ ಮನೆಯವರ ವಿರುದ್ಧವಾಗಿ ವಿವಾಹವಾಗುತ್ತಿದ್ದಾರೆ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿವೆ.
ಇದೀಗ ಸೋನಾಕ್ಷಿ ಮದುವೆ ಬಗ್ಗೆ ಅವರ ಬೆಸ್ಟ್ ಫ್ರೆಂಡ್ ಗುಟ್ಟು ರಟ್ಟು ಮಾಡಿದ್ದಾರೆ. ಮುಂಬೈನಲ್ಲಿ ಇಬ್ಬರೂ ವಿವಾಹವಾಗಲಿದ್ದು, ಹತ್ತಿರದ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಾಗಲಿದ್ದಾರೆ.
ಮೂಲದ ಪ್ರಕಾರ ಅವರಿಬ್ಬರೂ ಈಗಾಗಲೇ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದು, 23ರಂದು ಆರತಕ್ಷತೆ ಇಟ್ಟುಕೊಂಡಿದ್ದಾರಷ್ಟೇ. ಇದರಲ್ಲಿ ಯಾವುದೇ ಸಂಪ್ರದಾಯಗಳ ಆಚರಣೆ ಇರುವುದಿಲ್ಲ.
ಸೋನಾಕ್ಷಿಯ ಕುಟುಂಬದ ಯಾವುದೇ ಸದಸ್ಯರು ಇದುವರೆಗೆ ಮದುವೆಯ ಬಗ್ಗೆ ಮಾತನಾಡದಿದ್ದರೂ, ಸೋನಾಕ್ಷಿ ಅವರ ಕುಟುಂಬದ ಆಪ್ತ ಮೂಲಗಳು ಮದುವೆಯ ಸುದ್ದಿ ನಿಜ ತಿಳಿಸಿವೆ. ಆದರೆ ಸೋನಾಕ್ಷಿ ಸಿನ್ಹಾ ಹಾಗೂ ತನ್ನ ಬಾಯ್ ಫ್ರೆಂಡ್ ಜಹೀರ್ ಇಕ್ಬಾಲ್ ಇಬ್ಬರು ಸಹ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ.