ಸ್ಯಾಂಡಲ್ ವುಡ್ ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ರಿವಾಲ್ವರ್ ಕೈಯಲ್ಲಿ ಹಿಡಿದು ಅಚ್ಚರಿ ಮೂಡಿಸಿದ್ದಾರೆ. ಥೇಟ್ ತಂದೆಯಂತೆ ಸ್ವ್ಯಾಗ್ ತೋರಿಸಿರೋ ಸಾನ್ವಿ, ಬಾದ್ ಷಾ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದ್ದಾರೆ. ಸಾನ್ವಿ ನಯಾ ಖದರ್ ನೋಡಿ ಅಪ್ಪ- ಮಗಳು ಒಟ್ಟಿಗೆ ಸ್ಕ್ರೀನ್ ಮೇಲೆ ಬಂದರೆ ಬೆಂಕಿ- ಬಿರುಗಾಳಿ ಅಂತ ಕಮೆಂಟ್ ಮಾಡ್ತಿದ್ದಾರೆ. ಲೇಡಿ ಡಾನ್ ಲುಕ್ ನಲ್ಲಿ ಅಖಾಡಕ್ಕೆ ಇಳಿದಿರೋ ಸಾನ್ವಿ, ತಮ್ಮ ಸೋಷಿಯಲ್ ಪುಟದಲ್ಲಿ ಎರಡು ಪೋಟೋ ಹಂಚಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ಸಾನ್ವಿ ಕೊಟ್ಟಿರೋ ಲೈಟ್ಸ್… ಕ್ಯಾಮರಾ… ಆಕ್ಷನ್ ಕ್ಯಾಪ್ಶನ್.
ಪೈಲ್ವಾನ್ ಪುತ್ರಿ ಪಿಸ್ತೂಲ್ ಕೈಲಿಡಿದಿರೋದು ಬರೀ ಫೋಟೋ ಪೋಸ್ ಗಾಗಿ ಅಲ್ಲ. ಬದಲಾಗಿ ಸ್ಪೆಷಲ್ ಸಾಂಗ್ ಗೆ. ಆ ಸಾಂಗ್ ಜಿಮ್ಮಿ ಚಿತ್ರದ್ದಾ ಅಥವಾ ಅಪ್ಪನ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಸಿನಿಮಾದ್ದಾ..? ಅಥವಾ ಸಾನ್ವಿ ಸುದೀಪ್ ಮಿಂಚಿರೋ ಆಲ್ಬಂ ಹಾಡಿನದ್ದಾ? ಈ ಮೂರು ಪ್ರಶ್ನೆಗಳು ಒಟ್ಟಿಗೆ ಹುಟ್ಟಿಕೊಂಡಿವೆ. ಕಾರಣ “ಜಿಮ್ಮಿ” ಚಿತ್ರದ ಮೂಲಕ ಸುದೀಪ್ ಪುತ್ರಿ ಸಾನ್ವಿ ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.
ಈಗಾಗಲೇ ರಿಲೀಸ್ ಆಗಿರೋ “ಜಿಮ್ಮಿ” ಟೈಟಲ್ ಟೀಸರ್ ನಲ್ಲಿ ಸಾನ್ವಿ ವಾಯ್ಸ್ ನಲ್ಲಿ ಕಿಕ್ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಜಿಮ್ಮಿ ಹಾಡಿಗೆ ಕಂಠ ಕುಣಿಸೋದ್ರ ಜೊತೆಗೆ ಮುಖಕ್ಕೆ ಬಣ್ಣ ಹಚ್ಚಿದರಾ? ಜಿಮ್ಮಿ ಹಾಡಿನಲ್ಲಿ ಸಾನ್ವಿ ಮಿಂಚಲಿದ್ದಾರಾ? ಹೀಗೊಂದು ಕುತೂಹಲದ ಜೊತೆಗೆ ಅಪ್ಪನ ಮ್ಯಾಕ್ಸ್ ಮೂಲಕ ಮಾಯಲೋಕಕ್ಕೆ ಎಂಟ್ರಿ ಕೊಡಬಹುದಾ? ಅಥವಾ ಹೊಸ ಆಲ್ಬಂ ಮೂಲಕ ಮ್ಯೂಸಿಕ್ ಲೋಕಕ್ಕೆ ಕಿಚ್ಚು ಹಚ್ಚಬಹುದು? ಈ ಕೌತುಕವೂ ಕಿಚ್ಚನ ಫ್ಯಾನ್ಸ್ ಎಕ್ಸೈಟ್ ಮೆಂಟ್ ಗೆ ಕಾರಣವಾಗಿದೆ.
ಸಾನ್ವಿ ಅಪ್ಪನಂತೆ ಮಗಳು ಬಹುಮುಖ ಪ್ರತಿಭಾವಂತೆ. ಅಪ್ಪನ ಫುಟ್ಸ್ಟೆಪ್ ಫಾಲೋ ಮಾಡಿಕೊಂಡು ಮುನ್ನಡೆಯುತ್ತಿರೋ ಸಾನ್ವಿ ಸುದೀಪ್ ಮಲ್ಟಿಟಾಸ್ಕಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ಸಂಗೀತದ ಗೀಳು ಅಂಟಿಸಿಕೊಂಡಿರೋ ಸಾನ್ವಿ, ಸಿಂಗಿಂಗ್ ಜೊತೆಗೆ ಡ್ರಾಯಿಂಗ್, ಡ್ಯಾನ್ಸಿಂಗ್ನಲ್ಲೂ ಕ್ರಿಯೇಟಿವಿಟಿ ತೋರಿಸ್ತಿದ್ದಾರೆ.
ಇತ್ತೀಚೆಗಷ್ಟೇ ಸಾನ್ವಿ, ತಮ್ಮ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್ ತಮನ್ರನ್ನ ಭೇಟಿ ಮಾಡಿದ್ದರು. ತಮನ್ ಭೇಟಿ ಮಾಡುವುದು ಬಹುದಿನದ ಕನಸಾಗಿತ್ತು ಕೊನೆಗೂ ಆದ್ರೆ ಈಡೇರಿತ್ತು ಅಂತ ಸಾನ್ವಿ ಸುದೀಪ್ ಟ್ವೀಟ್ ಮಾಡಿದ್ದರು. ತಮನ್ ಅವರ ಜೊತೆಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಲೈಟ್ಸ್ ಕ್ಯಾಮರಾ ಆಕ್ಷನ್ ಅಂತೇಳೋ ಮೂಲಕ ದೊಡ್ಡದಾಗಿ ಸಿಗ್ನಲ್ ಕೊಟ್ಟಿದ್ದಾರೆ. ಅದೇನು ಅನ್ನೋದನ್ನ ಖುದ್ದು ಸಾನ್ವಿ ರಿವೀಲ್ ಮಾಡುವ ತನಕ ಕುತೂಹಲ ಭರಿತರಾಗಿ ಕಾದುನೋಡಬೇಕು.