- ಸುದೀಪ್ ಮಗಳು ಸಾನ್ವಿ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿರುವಂತಿದೆ
- ಸಾನ್ವಿ ಇದೀಗ ಟ್ಯಾಟೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್ನಲ್ಲಿದ್ದಾರೆ
- ಪೀಕು ಎಂದು ಟ್ಯಾಟೂ ಹಾಕಿಸಿಕೊಂಡ ಸಾನ್ವಿ ಸುದೀಪ್
ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಅವರು ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿರುವಂತಿದೆ. ಮಲ್ಟಿ ಟ್ಯಾಲೆಂಟೆಡ್ ಮತ್ತು ಸಖತ್ ಬ್ಯೂಟಿಫುಲ್ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಸಾನ್ವಿ ಇದೀಗ ಟ್ಯಾಟೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್ನಲ್ಲಿದ್ದಾರೆ. ಸಾನ್ವಿ ಸುದೀಪ್ ಅವರು ಕತ್ತಿನ ಭಾಗದಲ್ಲಿ ಪೀಕು ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪೀಕು ಎಂದರೆ ಹಿಂದಿ ಸಿನಿಮಾದ ಹೆಸರಂತೂ ಅಲ್ಲ. ಪೀಕು ಎಂದರೆ ಸಾನ್ವಿಯ ತಾಯಿ ಪ್ರಿಯಾ ಸುದೀಪ್ ಅವ ಅಡ್ಡ ಹೆಸರು. ಪ್ರಿಯಾ ಸುದೀಪ್ ಅವನ್ನ ಅವರ ತಾತ ಮುದ್ದಾಗಿ ಪೀಕು ಎಂದು ಕರೆಯುತ್ತಿದ್ದರಂತೆ. ಹಾಗಾಗಿ ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.