ಸೌತ್ ಸಿನಿಮಾಗಳಲ್ಲಿ ತಮ್ಮದೆ ಆದ ಹೆಸರು ಗಳಿಸಿರುವ ತಮಿಳು ನಟಿ ಜ್ಯೋತಿಕ. ಇವರು ಖ್ಯಾತ ನಟ ಸೂರ್ಯ ಅವರನ್ನು ಮದುವೆಯಾಗಿದ್ದು ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಸಂದರ್ಶನ ಒಂದರಲ್ಲಿ ಸಂದರ್ಶಕರು ನೀವು ಈ ಬಾರಿ ವೋಟು ಮಾಡಲು ಬರಲಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಜ್ಯೋತಿಕ ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ. ರಾಜ್ಯದಲ್ಲಿ ಇಲ್ಲದೆ ಇರಬಹುದು, ಅನಾರೋಗ್ಯ ಆಗಿರಬಹುದು. ಕೆಲವೊಮ್ಮೆ ಯಾರಿಗೂ ಗೊತ್ತಾಗದೆ ವೋಟ್ ಮಾಡಿರಬಹುದು, ಆನ್ ಲೈನ್ ನಲ್ಲಿ ವೋಟ್ ಮಾಡಿರಬಹುದು. ಅದು ಅವರ ಪ್ರೈವೇಟ್ ವಿಚಾರ ಅದನ್ನ ಗೌರವಿಸಬೇಕು ಎಂದು ಹೇಳಿದ್ದರು.
ಆದ್ರೆ ನೆಟ್ಟಿಗರು ಆನ್ಲೈನ್ ನಲ್ಲಿ ವೋಟ್ ಮಾಡಿರಬಹುದು ಎಂಬ ವಿಷಯ ಕುರಿತು ಟ್ರೊಲ್ ಮಾಡಿದ್ದಾರೆ. ಆನ್ಲೈನ್ ನಲ್ಲಿ ವೋಟ್ ಮಾಡುವ ಅವಕಾಶವಿದ್ದರೆ ನಮಗೂ ಹೇಳಿ ನಾವು ಆನ್ಲೈನ್ ನಲ್ಲೇ ಮತದಾನ ಮಾಡುತ್ತೇವೆ ಎಂದು ಜ್ಯೋತಿಕ ಅವರ ಕಾಲೆಳೆದಿದ್ದಾರೆ. ವೋಟ್ ಮಾಡಿಲ್ಲ ಎಂದು ಒಪ್ಪಿಕೊಳ್ಳಿ ಎಂದು ಸೂರ್ಯ ಪತ್ನಿ ಜ್ಯೋತಿಕಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.