- 7 ನೇ ತರಗತಿಗೆ ನಟಿ ತಮನ್ನಾ ಭಾಟಿಯಾ ಬಗ್ಗೆ ಪಠ್ಯ
- ತಮನ್ನಾ ಹುಟ್ಟಿದ್ದು, ಅವರು ಮಾಡಿದ ಸಿನಿಮಾಗಳ ಬಗ್ಗೆ ಪಾಠ
7 ನೇ ತರಗತಿಗೆ ನಟಿ ತಮನ್ನಾ ಭಾಟಿಯಾ ಬಗ್ಗೆ ಪಠ್ಯ ಬಂದಿದೆ. ಇದನ್ನು ಹಲವರು ಪಾಲಕರು ವಿರೋಧಿಸುತ್ತಾ ಇದ್ದಾರೆ. ಹೆಬ್ಬಾಳದ ಸಿಂಧಿ ಕಾಲೇಜು ವಿದ್ಯಾರ್ಥಿಗಳಿಗೆ ತಮನ್ನಾ ಭಾಟಿಯಾ ಪಠ್ಯ ನೀಡಲಾಗಿದೆ.
ಸಿಂಧಿ ಕಾಲೇಜಿನ ಪಠ್ಯೇತರ ಪಠ್ಯದಲ್ಲಿ ಈ ಪಾಠ ಅಳವಡಿಕೆ ಮಾಡಲಾಗಿದೆ. ಈ ಕುರಿತು ಕೆಲವು ಫೋಟೋಗಳು ಲಭ್ಯವಾಗಿದ್ದು, ಪಾಠದಲ್ಲಿ ತಮನ್ನಾ ಅವರ ಬಗ್ಗೆ ನೀಡಲಾಗಿದೆ. ಅವರು ಹುಟ್ಟಿದ್ದು ಅವರು ಮಾಡಿದ ಸಿನಿಮಾ ಇವುಗಳ ಬಗ್ಗೆ ನೀಡಲಾಗಿದೆ. ಸಿಂಧ ಸಮುದಾಯ ಬಗ್ಗೆ ನೀಡುವಾಗ ಈ ರೀತಿ ಯಡವಟ್ಟಾಗಿದೆ.
7 ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪಾಠ ನೀಡಲಾಗಿದೆ. ಸಿಂಧ್ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಎಡವಟ್ಟು ಮಾಡಿದ್ದಾರೆ ಎನ್ನಲಾಗ್ತಿದೆ. ನಟಿ ಮಾಡಿದ್ದ ಸಿನಿಮಾಗಳ ಬಗ್ಗೆ ಹಾಗೂ ತೆಲುಗು, ತಮಿಳಿನಲ್ಲಿ ಅವರು ಅಭಿನಯಿಸಿರುವ ಬಗ್ಗೆ ಪಠ್ಯದಲ್ಲಿ ನೀಡಲಾಗಿದೆ. ಸಿಂಧ್ ವಿಛಜನೆಯ ನಂತರ ಜೀವನ, ವಲಸೆ, ಸಮುದಾಯ ಮತ್ತು ಕಲಹ ಎಂಬ ಶರ್ಶಿಕೆಯಡಿ ತಮನ್ನಾ ಪಠ್ಯ ಇದೆ ಎಂದು ಹೇಳಲಾಗಿದೆ. ಬಾಲಿವುಡ್ ನಟ ರಣಬೀರ್ ಸಿಂಗ್ ಹಾಗೂ ತಮನ್ನಾ ಪಠ್ಯದ ಬಗ್ಗೆ ಭಾರಿ ಚರ್ಚೆ ಆಗ್ತಿದೆ.