ತಮಿಳು ಚಿತ್ರರಂಗದ ಸ್ಟಾರ್ ನಟ ತಲಾ ಅಜಿತ್ ಅವರ ಪತ್ನಿ ಶಾಲಿನಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪತ್ನಿ ಆಸ್ಪತ್ರೆಯಲ್ಲಿರುವ ಸುದ್ದಿ ತಿಳಿದ ಕೂಡಲೇ ವಿದೇಶದಲ್ಲಿ ನಡೆಯುತ್ತಿದ್ದ “ವಿದಾಮುಯರ್ಚಿ” ಸಿನಿಮಾ ಶೂಟಿಂಗ್ಗೆ ಬ್ರೇಕ್ ಹಾಕಿ ಅಜಿತ್ ಚೆನ್ನೈಗೆ ಓಡೋಡಿ ಬಂದಿದ್ದಾರೆ.
ಅಜಿತ್ ಪತ್ನಿ ಶಾಲಿನಿ ಅವರು 80ರ ದಶಕದಲ್ಲಿ ಬಾಲನಟಿಯಾಗಿ ಫೇಮಸ್ ಆಗಿದ್ದರು. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿ ಜನಪ್ರಿಯತೆ ಗಳಿಸಿದ್ದರು. 1997ರ ಕೆಲವು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದರು. ಅಜಿತ್ ಜೊತೆ ವಿವಾಹವಾದ ಬಳಿಕ ಅವರು ನಟನೆಯಿಂದ ದೂರು ಉಳಿದುಕೊಂಡರು. ಶಾಲಿನಿ ತಂಗಿ ಶಾಮಿಲಿ (ಬೇಬಿ ಶಾಮಿಲಿ) ಕೂಡ ಬಾಲ ನಟಿಯಾಗಿ 90ರ ದಶಕದಲ್ಲಿ ತುಂಬಾ ಖ್ಯಾತಿ ಹೊಂದಿದ್ದರು. ಆದರೆ ಈಗ ನಟಿ ಶಾಲಿನಿ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಜಿತ್ ಕುಮಾರ್ ಪತ್ನಿ ಶಾಲಿನಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸ್ವತಃ ಶಾಲಿನಿಯವರೇ ಆಸ್ಪತ್ರೆ ಬೆಡ್ ಮೇಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಾಲಿನಿ ಆರೋಗ್ಯದ ಬಗ್ಗೆ ಕುಟುಂಬದವರು ಇನ್ನಷ್ಟೇ ಅಪ್ಡೇಟ್ ನೀಡಬೇಕಿದೆ. ಅದಕ್ಕಾಗಿ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಅಜಿತ್ ಪತ್ನಿ ಶಾಲಿನಿ ಅವರು ಸದಾ ಫ್ಯಾಮಿಲಿ ಫೋಟೋ ಹಂಚಿಕೊಳ್ಳುತ್ತಾರೆ. ಆದರೆ ಈಗ ಅವರೊಂದು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳಿಗೆ ಆತಂಕ ಆಗಿದೆ.
ಶಾಲಿನಿ ಅವರು ಈ ಬಾರಿ ಫೋಟೋ ಹಂಚಿಕೊಂಡಿರುವುದು ಆಸ್ಪತ್ರೆಯ ಬೆಡ್ ನಿಂದ ಹಾಗಾಗಿ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂಬುದು ಬಹಿರಂಗ ಆಗಿದೆ. ಆದ್ದರಿಂದ ಅಭಿಮಾನಿಗಳು ಬೇಸರಗೊಂಡ್ಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಶಾಲಿನಿ ಅವರು ರೋಗಿಗಳಿಗೆ ನೀಡುವ ಬಟ್ಟೆ ಧರಿಸಿದ್ದಾರೆ. ಅಲ್ಲದೇ ಅವರ ಕೈಗೆ ಬ್ಯಾಂಡ್ ಕಟ್ಟಲಾಗಿದೆ. ಯಾವುದೋ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದಕ್ಕೂ ಮುನ್ನ ತೆಗೆದ ಫೋಟೋ ಇದು ಎಂದು ನೆಟ್ಟಿಗರು ಊಹಿಸಿದ್ದಾರೆ.
ಶಾಲಿನಿ ಅವರಿಗೆ ಅಂಥ ಸಮಸ್ಯೆ ಏನಾಗಿದೆ ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಸ್ವತಃ ಶಾಲಿನಿ ಅವರೇ ಈ ಫೋಟೋವನ್ನು ಹಂಚಿಕೊಂಡಿರುವುದರಿಂದ ಅವರು ಸದ್ಯಕ್ಕೆ ಗುಣಮುಖರಾಗುತ್ತಿದ್ದಾರೆ ಎಂದು ಊಹಿಸಲಾಗಿದೆ. ಅನಾರೋಗ್ಯದ ಬಗ್ಗೆ ಕುಟುಂಬದವರು ಈವರೆಗೂ ಯಾವ ಮಾಹಿತಿ ಹಂಚಿಕೊಂಡಿಲ್ಲ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಶಾಲಿನಿ ಅವರ ಆಪರೇಷನ್ ಸಲುವಾಗಿ ಅಜಿತ್ ಅವರು ‘ವಿದಾಮುಯರ್ಚಿ’ ಸಿನಿಮಾದ ಶೂಟಿಂಗ್ಗೆ ಬ್ರೇಕ್ ಹಾಕಿ ಆಸ್ಪತ್ರೆಗೆ ಬಂದಿದ್ದಾರೆ ಎನ್ನಲಾಗಿದೆ.