ನಟಿ ಸೋನಲ್ ಮೊಂತೇರೋ ಹಾಗೂ ತರುಣ್ ಸುಧೀರ್ ಅವರು ಆಗಸ್ಟ್ 10-11ರಂದು ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ವಿವಾಹ ಆಗುತ್ತಿದ್ದಾರೆ. ಆಗಸ್ಟ್ 10ರಂದು ಆರತಕ್ಷತೆ ಕಾರ್ಯಕ್ರಮ ನಡೆದರೆ ಆಗಸ್ಟ್ 11ರಂದು ವಿವಾಹ ಕಾರ್ಯಕ್ರಮ ನೆರವೇರುತ್ತಿದೆ. ವಿವಾಹದ ಬಗ್ಗೆ ಮಾಹಿತಿ ನೀಡಲು ಈ ದಂಪತಿ ಸುದ್ದಿಗೋಷ್ಠಿ ಕರೆದಿದ್ದಾರೆ. ಇದರಲ್ಲಿ ಮದುವೆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸೋನಲ್ ಹಾಗೂ ತರುಣ್ ಸುಧೀರ್ ಅವರು ಮೊದಲ ಬಾರಿಗೆ ಭೇಟಿ ಆಗಿದ್ದು ‘ರಾಬರ್ಟ್’ ಸಿನಿಮಾ ಸಂದರ್ಭದಲ್ಲಿ. ತರುಣ್ ಅವರು ‘ರಾಬರ್ಟ್’ ಚಿತ್ರ ನಿರ್ದೇಶನ ಮಾಡಿದರೆ, ಸೋನಲ್ ಮುಖ್ಯ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಜರ್ನಿ ಬಗ್ಗೆ, ಮದುವೆ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ.