‘ರಾಬರ್ಟ್’ ಸಿನಿಮಾದಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಅವರು ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಈ ವಿಷಯದ ಬಗ್ಗೆ ಗ್ಯಾರಂಟಿ ನ್ಯೂಸ್ಗೆ ಪ್ರತಿಕ್ರಿಯಿಸಿದ ತರುಣ್ ಸುಧೀರ್ ಈ ವಿಚಾರ ಇವತ್ತಿನದಲ್ಲಾ ತುಂಬಾ ದಿನಗಳ ಆಯ್ತು, ಮದುವೆ ಆಗ್ತಿರೋದು ನಿಜ ಆದ್ರೆ ಒಂದಷ್ಟು ದಿನಗಳ ಸಮಯ ಕೊಡಿ ಒಂದೊಳ್ಳೆ ವೇದಿಕೆಯಲ್ಲಿ ಅನೌನ್ಸ್ ಮಾಡೋಕೆ ಕಾಯ್ತಿದ್ವಿ ಅಷ್ಟೇ ಮದುವೆ ದಿನಾಂಕದ ಬಗ್ಗೆ ಆದಷ್ಟು ಬೇಗ ತಿಳಿಸ್ತೀವಿ, ಒಂದಷ್ಟು ಕೆಲಸಗಳು ಆಗ್ತಿವೆ ಅದೆಲ್ಲವನ್ನೂ ತಿಳಿಸ್ತೀನಿ ಎಂದು ತಮ್ಮ ಮದುವೆಯ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.