- ಹೇಮಾ ಅವರನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
- ” ನಾನು ದೊಡ್ಡ ನಟಿ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ”ಎಂದ ನಟಿ
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಲಾಕ್ ಆಗಿದ್ದಾರೆ. ರೇವ್ ಪಾರ್ಟಿಯಲ್ಲಿ ಹೇಮಾ ಮಾದಕ ವಸ್ತು ಸೇವಿಸಿದ್ದರು ಅನ್ನೋದು ರಕ್ತ ಪರೀಕ್ಷೆಯಿಂದ ಖಚಿತವಾಗಿದೆ. ಈ ಮಧ್ಯೆ ಸಿಸಿಬಿ ಪೊಲೀಸರು ಹೇಮಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಹೇಮಾ ನಟಿ ಅನ್ನೋದೆ ಗೊತ್ತಿರಲಿಲ್ಲ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರನ್ನು ವಿಚಾರಣೆ ಮಾಡುವಂತೆ, ಹೇಮಾ ಅವರನ್ನು ವಿಚಾರಣೆ ನಡೆಸಲಾಗಿತ್ತು. ಆದ್ರೆ ನಟಿ ಹೇಮಾ ಪೊಲೀಸರ ಮುಂದೆ ” ನಾನು ದೊಡ್ಡ ನಟಿ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ”ಎಂದು ಹೇಳಿದ್ದರಂತೆ. ಈ ವೇಳೆ ಪೊಲೀಸರು ಪರಿಶೀಲನೆ ಮಾಡಿದಾಗ ಅವರು ನಟಿ ಅನ್ನೋದು ಗೊತ್ತಾಗಿದೆ.
ಈ ಮಧ್ಯೆ ಹೇಮಾ ಅವರು ಸಿಸಿಬಿ ಪೊಲೀಸರ ಜೊತೆ ಕಿರಿಕ್ ಮಾಡಿದ್ದರು. ವಿಚಾರಣೆಗೆಂದು ಪೊಲೀಸರು ಇರಿಸಿಕೊಂಡಿದ್ದಾಗ ಹೇಮಾ ಕಿರಿಕ್ ತೆಗೆದಿದ್ದರು. “ ನನಗೆ ಸರಿಯಾದ ಊಟ ಕೊಟ್ಟಿಲ್ಲ, ನಾನೋರ್ವ ನಟಿ” ಆದರೂ ಸರಿಯಾಗಿ ಟ್ರೀಟ್ ಮಾಡಿಲ್ಲ ಎಂದು ಕಿರಿಕ್ ಮಾಡಿಕೊಂಡಿದ್ದರು. ರೇವ್ ಪಾರ್ಟಿ ಶನಿವಾರ ಶುರುವಾಗಿತ್ತು. ಒಂದು ದಿನ ಪಾರ್ಟಿ ಆದ ಬಳಿಕ ಸಿಸಿಬಿ ಪೊಲೀಸರಿಗೆ ವಿಚಾರ ತಿಳಿದು ರೇಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.