ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿವೆ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಿ ಗೆಲ್ಲೋದು ಎಂದರೆ ಸುಲಭದ ಮಾತಲ್ಲ. ಇತ್ತೀಚೆಗೆ ಥಿಯೇಟರ್ನಲ್ಲಿ ರಿಲೀಸ್ ಆದ “ಟಿಲ್ಲುಸ್ಕ್ವೇರ್” ಹಾಗೂ “ದಿ ಫ್ಯಾಮಿಲಿ ಸ್ಟಾರ್” ಸಿನಿಮಾ ಒಂದೇ ದಿನ ಒಟಿಟಿಗೆ ಕಾಲಿಡುತ್ತಿವೆ.
ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ನಟನೆಯ “ದಿ ಫ್ಯಾಮಿಲಿ ಸ್ಟಾರ್ “ ಸಿನಿಮಾ ಹೇಳಿಕೊಳ್ಳುವಂತಹ ಮೆಚ್ಚುಗೆ ಪಡೆದಿಲ್ಲ. ಏಪ್ರಿಲ್ 5 ರಂದು ಥೀಯೇಟರ್ನಲ್ಲಿ ರಿಲೀಸ್ ಆದ ಸಿನಿಮಾ ಕೇವಲ 21 ನೇ ದಿನಕ್ಕೆ ಒಟಿಟಿಗೆ ಕಾಲಿಡುತ್ತಿದೆ. ಏಪ್ರಿಲ್ 26 ರಂದು ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ವೀಕ್ಷಣೆಗೆ ಲಭ್ಯವಿದೆ.
ಇನ್ನು ಅನುಪಮಾ ಪರಮೇಶ್ವರನ್ ನಟನೆಯ “ಟಿಲ್ಲು ಸ್ಕ್ವೇರ್” ಸಿನಿಮಾ ಕೂಡ ಏಪ್ರಿಲ್ 26ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ. ನೆಟ್ ಫ್ಲಿಕ್ಸ್ನಲ್ಲಿ ತೆಲುಗು ಜೊತೆಗೆ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರಸಾರ ಕಾಣಲಿದೆ. ಮಾರ್ಚ್ 29ರಂದು ಥಿಯೇಟರ್ನಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ಅನುಪಮಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಸಿನಿಮಾ ಒಟಿಟಿಯತ್ತ ಮುಖ ಮಾಡಿದೆ.