ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ 8 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ 8 ಜನರಲ್ಲಿ ತೆಲುಗು ನಟಿ ಹೇಮಾ ಕೂಡ ಒಬ್ಬರು. ಆದರೆ, ನಟಿ ಹೇಮಾ ವಿಚಾರಣೆಗೆ ಹಾಜರಾಗದೇ ಹೈದ್ರಬಾದ್ನಿಂದಲೇ ವಿಡಿಯೋ ಮಾಡಿ ತಿರುಗೇಟು ಕೊಡುವ ಕೆಲಸ ಮಾಡ್ತಿದ್ದಾರೆ. ಡ್ರಗ್ಸ್ ಕೇಸ್ನಲ್ಲಿ ತಮ್ಮ ಹೆಸರು ಕೇಳಿಬಂದಾಗಿಂದಲೂ ನನಗೂ ಆ ರೇವ್ ಪಾರ್ಟಿಗೂ ಸಂಬಂಧ ಇಲ್ಲ. ನಾನು ಆ ರೇವ್ ಪಾರ್ಟಿನಲ್ಲಿ ಭಾಗವಹಿಸಿಲ್ಲ ಅಂತಲೇ ಹೇಳ್ತಾ ಬರ್ತಿರೋ ನಟಿ ಹೇಮಾ, ಇವತ್ತು ನನ್ನಿಂದಲೂ ತಪ್ಪಾಗಿದೆ. ತಪ್ಪು ಮಾಡದೇ ಇರೋದಕ್ಕೆ ನಾನೇನು ದೇವರಲ್ಲ ಎಂದಿದ್ದಾರೆ. ಆದರೆ, ಸಿಸಿಬಿ ಮುಂದೆ ಬಂದು ವಿಚಾರಣೆಗೆ ಹಾಜರಾಗ್ತಿಲ್ಲ. ಬದಲಾಗಿ ಹೈದ್ರಬಾದ್ನಲ್ಲಿ ಕೂತ್ಕೊಂಡೇ ಸೋಷಿಯಲ್ ಮೀಡಿಯಾ ಮೂಲಕ ಉತ್ತರ ಕೊಡ್ತಿದ್ದಾರೆ.
ಅಚ್ಚರಿ ಅಂದರೆ ನಟಿ ಹೇಮಾ ಬೆಂಗಳೂರು ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ. ಬೆಂಗಳೂರು ಪೊಲೀಸರು ನನ್ನ ಟಾರ್ಗೆಟ್ ಮಾಡಿದ್ದಾರೆ. ನಟಿ ಎನ್ನುವ ಕಾರಣಕ್ಕೆ ಸುಖಾಸುಮ್ಮನೆ ನನ್ನನ್ನ ಎಳೆದು ತರ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ವಿಚಾರಣೆಗೆ ಹೋಗಲ್ಲ. ಬದಲಾಗಿ ಕಾನೂನು ಹೋರಾಟ ಮಾಡ್ತೀನಿ. ಪೊಲೀಸರ ವಿರುದ್ದವೇ ಲೀಗಲ್ ಆಗಿ ಫೈಟ್ ಮಾಡ್ತೀನಿ ಎಂದಿದ್ದಾರೆ. ನಟಿ ಹೇಮಾ ಅವರ ಈ ನಡೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಬೆಂಗಳೂರು ಸಿಸಿಬಿ ಪೊಲೀಸರು ನಟಿ ಹೇಮ ವಿರುದ್ದ ಯಾವ್ ರೀತಿ ಕ್ರಮ ಕೈಗೊಳ್ತಾರೆ? ಡ್ರಗ್ಸ್ ಪ್ರಕರಣದಲ್ಲಿ ತಗಲಾಕ್ಕಿಕೊಂಡಿರೋ ಪವರ್ ನಟಿ ಹೇಮಾ ತನ್ನ ಮೇಲಿರುವ ಆರೋಪಗಳನ್ನೆಲ್ಲಾ ಅದ್ಯಾವ ರೀತಿ ಸುಳ್ಳು ಎಂದು ಸಾಬೀತುಪಡಿಸ್ತಾರೆ ಅನ್ನೋದನ್ನ ಕಾದುನೋಡಬೇಕು.
ಸಿಸಿಬಿ ಪೊಲೀಸರ ತನಿಖೆಯಲ್ಲಿ ನಟಿ ಹೇಮಾ ಮಾದಕ ವಸ್ತುಗಳನ್ನ ಸೇವಿಸಿರೋದು ಖಚಿತವಾಗಿದೆ. ಪಾರ್ಟಿಯಲ್ಲಿ 103 ಜನರು ಪಾಲ್ಗೊಂಡಿದ್ದು ಎಲ್ಲರ ಬ್ಲಡ್ ಸ್ಯಾಂಪಲ್ಸ್ ಪಡೆದು ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ 86 ಜನ ಡ್ರಗ್ಸ್ ಸೇವನೆ ಮಾಡಿರೋದು ಪಕ್ಕಾ ಆಗಿತ್ತು. ಅದರಲ್ಲಿ ನಟಿ ಹೇಮಾ ಕೂಡ ಡ್ರಗ್ಸ್ ಸೇವಿಸಿರೋದಾಗಿ ರಿಸಲ್ಟ್ ಬಂದಿದೆ. ಇಷ್ಟು ದಿನ ನಾನು ಪಾರ್ಟಿಗೆ ಹೋಗಿಲ್ಲ ಅಂತಿದ್ದ ಹೇಮಾ ಇವತ್ತು ನನ್ನಿಂದಲೂ ತಪ್ಪಾಗಿದೆ, ತಪ್ಪು ಮಾಡದೇ ಇರೋದಕ್ಕೆ ನಾನೇನು ದೇವರಲ್ಲ ಎಂದಿದ್ದಾರೆ.