ಟಾಲಿವುಡ್ ಖ್ಯಾತ ನಟ ಮೋಹನ್ ಬಾಬು ಮನೆಯ ಗಲಾಟೆ ತಾರಕಕ್ಕೆ ಏರಿದೆ. ಮೋಹನ್ ಬಾಬು ಅವರ ಮಕ್ಕಳಾದ ನಟ ಮಂಚು ವಿಷ್ಣು, ಮಂಚು ಮನೋಜ್ ಆಸ್ತಿ ಕಿತ್ತಾಟ ಬೀದಿಗೆ ಬಂದಿದೆ. ಅಪ್ಪ ಮೋಹನ್ ಬಾಬು ಹಾಗೂ ಮಗ ಮಂಚು ಮನೋಜ್ ನಡುವೆ ಮನಸ್ತಾಪ ಹೆಚ್ಚಿದ್ದು, ನಿನ್ನೆ ರಾತ್ರಿ ಮಂಚು ಮನೋಜ್ ಹಾಗೂ ಮೋಹನ್ ಬಾಬು ನಡುವೆ ಕಿತ್ತಾಟ ಕೂಡ ಆಗಿದೆ. ಮಂಚು ಫ್ಯಾಮಿಲಿ ರಂಪಾಟ ಮೀತಿ ಮೀರಿದ ಹಿನ್ನೆಲೆ ಪೊಲೀಸ್ ಮೋಹನ್ ಬಾಬು ಫ್ಯಾಮಿಲಿಗೆ ಶಾಕ್ ಕೊಟ್ಟಿದ್ದಾರೆ. ಮೋಹನ್ ಬಾಬು, ವಿಷ್ಣು ಹಾಗೂ ಮನೋಜ್ಗೆ ನೋಟಿಸ್ ಕೊಟ್ಟಿದ್ದರು. ನೋಟಿಸ್ ಕೊಟ್ಟ ಬೆನ್ನಲ್ಲೇ ಮೋಹನ್ ಬಾಬು ಮ್ಯಾನೇಜರ್ನನ್ನು ಅರೆಸ್ಟ್ ಮಾಡಿದ್ದಾರೆ.
ಮೋಹನ್ ಬಾಬು ಆಡಿಯೋ ಫೈಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಹೆಂಡತಿ ಮಾತು ಕೇಳಿ ಈ ತರ ಆಡ್ತಿದ್ದಾನೆ. ಕುಡಿತ ಚಟಕ್ಕೆ ಬಿದ್ದಿದ್ದಾನೆ ಎಂದು ಮೋಹನ್ ಬಾಬು ಆಡಿಯೋದಲ್ಲಿ ಮಗನ ಮೇಲೆ ಆರೋಪ ಮಾಡಿದ್ದರು. ನಿನ್ನೆ ರಾತ್ರಿ ಮಂಚು ಮೋಹನ್ ಬಾಬು ಮನೆ ಬಳಿ ಹೈಡ್ರಾಮಾ ಕೂಡ ನಡೆದಿತ್ತು. ಮಂಚು ಮನೋಜ್ ನನ್ನು ಮನೆಯೊಳಗೆ ಬಿಡ್ತಿಲ್ಲ ಅಂತ ಗೇಟು ತಳ್ಳಿ ಮನೆಗೆ ನುಗ್ಗಿದ್ರು. ಬಳಿಕ ಮೋಹನ್ ಬಾಬು ಹೊರಗೆ ಬಂದು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದು, ರಾತ್ರೋರಾತ್ರಿ ಮೋಹನ್ ಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮನೋಜ್ ದೂರಿನ ಹಿನ್ನೆಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನಟ ಮೋಹನ್ ಬಾಬು ಅವರ ಮ್ಯಾನೇಜರ್ ವೆಂಕಟ್ ಕಿರಣ್ ಕುಮಾರ್ ಅವರನ್ನು ಪಹಾಡಿ ಷರೀಫ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೋಹನ್ ಬಾಬು ಮನೆಯಲ್ಲಿ ಮನೋಜ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಮೇಲೆ ಬಂಧಿಸಲಾಗಿತ್ತು. ಸಿಸಿಟಿವಿಯಲ್ಲಿ ಕಿರಣ್ ಹಲ್ಲೆ ಮಾಡಿದ ದೃಶ್ಯವಿದೆ ಎನ್ನಲಾಗ್ತಿದೆ.
ಮೋಹನ್ ಬಾಬು ಮನೆಯ ಜಗಳ ಜೋರಾಗ್ತಿದ್ದಂತೆ ಪೊಲೀಸರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಈ ಕೇಸ್ಗೆ ಸಂಬಂಧಿಸಿದಂತೆ ಪೊಲೀಸರು ಮೋಹನ್ ಬಾಬು, ಮಂಚು ವಿಷ್ಣು ಹಾಗೂ ಮಂಚು ಮನೋಜ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳಿಸಿದ್ದಾರೆ ಎನ್ನಲಾಗ್ತಿದೆ.