ಪುಷ್ಪ ಚಿತ್ರದ ಸೀಕ್ವೆಲ್ ಪುಷ್ಪ-2 ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ ಬರೋಬ್ಬರಿ 260 ಕೋಟಿ (ಗ್ರಾಸ್) ಬೃಹತ್ ಮೊತ್ತದ ಹಣ ಗಳಿಸೋ ಮೂಲಕ ಬಾಲಿವುಡ್ ಜೊತೆ ಹಾಲಿವುಡ್ ಮಂದಿ ಕೂಡ ನಿಬ್ಬೆರಗಾಗುವಂತೆ ಮಾಡಿದೆ. ಅಂದ್ರೆ ನೆಟ್ 175 ಕೋಟಿ ಎನ್ನಲಾಗ್ತಿದೆ. ಸುಕುಮಾರ್ ನಿರ್ದೇಶನದ ಪುಷ್ಪ-2 ನಿಜಕ್ಕೂ ಅಷ್ಟು ಗಳಿಸಿದೆಯಾ..? ಯೆಸ್.. ವಿಶ್ವದಾದ್ಯಂತ ಮೊದಲ ದಿನವೇ 260 ಕೋಟಿ ಗಳಿಸೋ ಮೂಲಕ ರಾಜಮೌಳಿಯ ಬಾಹುಬಲಿ, ತ್ರಿಬಲ್ ಆರ್ ಚಿತ್ರಗಳ ಮೊದಲ ದಿನದ ರೆಕಾರ್ಡ್ ನ ಬ್ರೇಕ್ ಮಾಡಿ, ನೂತನ ದಾಖಲೆ ಬರೆದಿದೆ.
ಬಾಹುಬಲಿ-2 ಫಸ್ಟ್ ಡೇ ಕಲೆಕ್ಷನ್ 214 ಕೋಟಿ ಆದ್ರೆ RRR ಗಳಿಕೆ 223 ಕೋಟಿ ಆಗಿತ್ತು. ಅಲ್ಲು ಅರ್ಜುನ್- ರಶ್ಮಿಕಾ ಜೋಡಿ ಈ ಪಾಟಿ ಮೋಡಿ ಮಾಡಿದೆಯಾ ಅಂತ ನೋಡಿದ್ರೆ ಖಂಡಿತಾ ಇಲ್ಲ. ಕಾರಣ ಹೇಳಿದ್ರೆ ಶಾಕ್ ಆಗ್ತೀರಿ. ರಾಜಮೌಳಿಯ ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳ ರೇಟ್ ಆಫ್ ಅಡ್ಮಿಷನ್ ತುಂಬಾ ಕಡಿಮೆ ಇತ್ತು. ಅವುಗಳಿಗೆ ಹೋಲಿಸಿದ್ರೆ ಪುಷ್ಪ-2 ರೇಟ್ ಆಫ್ ಅಡ್ಮಿಷನ್ ಹೆಚ್ಚು ಕಡಿಮೆ ಡಬಲ್ ಇದೆ. ಅಂದ್ರೆ ಟಿಕೆಟ್ ದರ ದುಪ್ಪಟ್ಟು ಇದೆ. ಇದೊಂದೇ ಕಾರಣದಿಂದ ಗಲ್ಲಾ ಪೆಟ್ಟಿಗೆಯಲ್ಲಿ ಪುಷ್ಪ-2 ಈ ಪಾಟಿ ಸೌಂಡ್ ಮಾಡ್ತಿದೆ.
ಅಫಿಶಿಯಲಿ ಮೊದಲ ದಿನ ವಿಶ್ವದಾದ್ಯಂತ ಸೋಲ್ಡ್ ಔಟ್ ಆದ ಟಿಕೆಟ್ ಗಳ ಸಂಖ್ಯೆ ಬರೋಬ್ಬರಿ 12 ಕೋಟಿ ಎನ್ನಲಾಗ್ತಿದೆ. 123 ಕೋಟಿ ಟಿಕೆಟ್ಸ್ ನಿಂದ 260 ಕೋಟಿ ರೂಪಾಯಿ (ಗ್ರಾಸ್), 175 ಕೋಟಿ ರೂಪಾಯಿ (ನೆಟ್) ಗಳಿಕೆ ಆಗಿದೆ ಅನ್ನೋದು ಅಧಿಕೃತವಾಗಿ ಹೊರಬಿದ್ದಿದೆ. ಅಲ್ಲಿಗೆ ಪುಷ್ಪ-2 ದಾಖಲೆ ಬರೆದಿರಬಹುದು ಆದ್ರೆ ಅದು ಹೆಚ್ಚುವರಿ ಟಿಕೆಟ್ ದರದ ಮೂಲಕ ಅನ್ನೋದು ಗೊತ್ತಾಗ್ತಿದೆ. ಸೋ.. ಓಪನಿಂಗ್ ದೊಡ್ಡ ಮಟ್ಟಕ್ಕಿದ್ದರೂ ಸಹ, ಮೌಳಿಯ ಸಿನಿಮಾಗಳಷ್ಟು ಜನರಿಂದ ಪ್ರಶಂಸೆ, ಪ್ರತಿಕ್ರಿಯೆ ಗಳಿಸೋಕೆ ಆಗಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್