ಪುಷ್ಪ ಸಿನಿಮಾಗೆ ಮೊದಲಿಂದಲೂ ಒಂದಲ್ಲ ಒಂದು ಅಡೆತಡೆ ಬರುತ್ತಲೇ ಇದೆ. ಪುಷ್ಪ-2 ರಿಲೀಸ್ ಗೂ ಮುನ್ನ ಪ್ರೀ- ರಿಲೀಸ್ ಇವೆಂಟ್ ಕ್ಯಾನ್ಸಲ್ ಆಗಿತ್ತು. ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಕಾರಣಾಂತರಗಳಿಂದ ಇವೆಂಟ್ ಕ್ಯಾನ್ಸಲ್ ಮಾಡಿದ್ದರು. ಅದಲ್ಲದೇ ರಿಲೀಸ್ ಬಳಿಕ ಇದೀಗ ಸಾವಿರ ಕೋಟಿ ಕ್ಲಬ್ ಸೇರಿರೋ ಚಿತ್ರ ಇದಾಗಿದ್ದು, ಇದೇ ಭಾನುವಾರ ಡಿಸೆಂಬರ್ 15ಕ್ಕೆ ಬೆಂಗಳೂರಲ್ಲಿ ಸಕ್ಸಸ್ ಮೀಟ್ ಏರ್ಪಟ್ಟಿತ್ತು. ಆದರೆ ಅಲ್ಲು ಅರ್ಜುನ್ ಕರ್ನಾಟಕಕ್ಕೆ ಕಾಲಿಡೋ ಮುಂಚೆಯೇ ಈಗ ಮತ್ತೊಂದು ವಿಘ್ನಅಡ್ಡಿಯಾಗಿದೆ. ಈಗ ಅರೆಸ್ಟ್ ಆಗಿ ಪೋಲೀಸ್ ವಶದಲ್ಲಿದ್ದಾರೆ.
ಅಲ್ಲು ಅರ್ಜುನ್ ಕೆ.ಆರ್. ಪುರಂನ ITI ಗ್ರೌಂಡ್ ನಲ್ಲಿ ಗ್ರ್ಯಾಂಡ್ ಸಕ್ಸಸ್ ಇವೆಂಟ್ ಗೆ ಯೋಜನೆ ರೂಪಿಸಿದ್ದರು, ಕಾರ್ಯಕ್ರಮವೂ ಕೂಡ ನಿಗದಿಯಾಗಿತ್ತು. ಸಂಜೆ 5 ಗಂಟೆಗೆ ಶುರು ಮಾಡೋಕೆ ಸಕಲ ಸಿದ್ಧತೆಯೂ ಸಹ ಆಗಿತ್ತು. ಆದರೀಗ ಕರ್ನಾಟಕಕ್ಕೆ ಕಾಲಿಡೋಕೆ ಮೊದಲೇ ಸಂಕಷ್ಟ ಶುರುವಾಗಿದೆ. ನಾಂಪಲ್ಲಿ ಕೋರ್ಟ್ ನಲ್ಲಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಆದೇಶ ನೀಡಿದ್ದು, ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ್ದ, ರೇವತಿಯ ಕೇಸ್ ಹಿನ್ನಲೆಯಲ್ಲಿ ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ 25 ಲಕ್ಷ ನಷ್ಟ ಪರಿಹಾರ ನೀಡಿದ್ದರು. ಆದ್ರೂ ಸಹ ಚಿಕ್ಕಡಪಲ್ಲಿ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ಇಂದು ಹೈದ್ರಾಬಾದ್ ಮನೆಯಲ್ಲೇ ಪುಷ್ಟ ಸ್ಟಾರ್ ಅರೆಸ್ಟ್ ಆಗಿದ್ದಾರೆ. ನಾಂಪಲ್ಲಿ ಕೋರ್ಟ್ ಗೆ ಪ್ರೊಡ್ಯೂಸ್ ಮಾಡಿದ್ದ ಪೊಲೀಸರು, ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ಆದೇಶ ನೀಡಿದೆ. ಸದ್ಯ ಈಗ ಅವರು ಪೊಲೀಸರ ಅತಿಥಿಯಾಗಿದ್ಧಾರೆ. ಸೋದರ ಮಾವ ಪವನ್ ಕಲ್ಯಾಣ್ ಡಿಸಿಎಂ ಆದ್ರೂ ಕೂಡ ಅಲ್ಲು ಅರ್ಜುನ್ ಅರೆಸ್ಟ್ ಆಗಿರುವ ಪ್ರಕರಣ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದೆ.