ಕೆಜಿಎಫ್, ಭೈರತಿ ರಣಗಲ್, ಕಾಟೇರ ಹಾಗೂ ಕಾಂತಾರ ಚಿತ್ರಗಳ ಒಗ್ಗರಣೆ ಪುಷ್ಪ-2 ಚಿತ್ರದಲ್ಲಿ ಎದ್ದು ಕಾಣುತ್ತೆ. ಆದರೂ ಸಹ ನೋಡುಗರಿಗೆ ಇದು ರುಚಿಸುತ್ತೆ. ಯಾಕಂದ್ರೆ ಸುಕುಮಾರ್ ಒಳ್ಳೆಯ ಪಾಕ ಪ್ರವೀಣ. ಒಂದೊಳ್ಳೆ ಮಸಾಲ ಅಡುಗೆ ಮಾಡೋ ಕಲೆ ಗೊತ್ತಿರೋ ಅದ್ಭುತ ತಂತ್ರಜ್ಞ. ಕಥೆಯಲ್ಲಿ ಹೊಸತನ ಇಲ್ಲವಾದ್ರೂ ಸಹ, ನೋಡುಗರಿಗೆ ನೆಕ್ಸ್ಟ್ ಸೀನ್ ಏನು ಬರಬಹುದು ಅಂತ ಊಹಿಸುವಂತಿದ್ದರೂ ಸಹ, ಪ್ರೆಸೆಂಟೇಷನ್ ಸಂಥಿಂಗ್ ಸ್ಪೆಷಲ್ ಅನಿಸಲಿದೆ.
ದಿನಗೂಲಿ ನೌಕರನಿಂದ ಹಿಡಿದು ಮಿಡಲ್ ಕ್ಲಾಸ್, ಶ್ರೀಮಂತನವರೆಗೆ ಎಲ್ಲಾ ವರ್ಗದವರಿಗೆ ಇಷ್ಟವಾಗುವಂತಹ ಸ್ಕ್ರೀನ್ ಪ್ಲೇ ಚಿತ್ರದಲ್ಲಿದೆ. ಇತ್ತೀಚೆಗೆ ಕಮರ್ಷಿಯಲ್ ಸಿನಿಮಾಗಳಲ್ಲಿ ಮಾಸ್ ಎಲಿಮೆಂಟ್ಸ್ ಗೆ ಹೆಚ್ಚು ಪ್ರಾಶಸ್ತ್ಯ ನೀಡ್ತಾರೆ. ಆದ್ರೆ ಸುಕುಮಾರ್ ಇಲ್ಲಿ ಫೈಟ್, ಡ್ಯಾನ್ಸ್, ಎಮೋಷನ್ಸ್, ಕಾಮಿಡಿ, ಗ್ಲಾಮರ್ ಹೀಗೆ ಎಲ್ಲವನ್ನು ಸಮರ್ಪಕವಾಗಿ ಬಳಸಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಪುಷ್ಪ ಕುಟುಂಬಕ್ಕೆ ಅವರ ಮನೆತನದ ಹೆಸರು ಸಮೇತ ಅಣ್ಣನ ಮಗಳ ಮದ್ವೆ ಇನ್ವಿಟೇಷನ್ ನಲ್ಲಿ ಹೆಸರುಗಳು ಮುದ್ರಿಸಿರೋ ಸೀಕ್ವೆನ್ಸ್ ಅದೆಷ್ಟೋ ಮಂದಿ ಶ್ರೀಸಾಮಾನ್ಯರಿಗೆ ಕನೆಕ್ಟ್ ಆಗಲಿದೆ. ಇನ್ನು ಗಂಗಮ್ಮ ಜಾತ್ರೆ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಹೆಣ್ಣೇ ಹುಟ್ಟಲಿ ಅಂತ ನಾಯಕನಟ ದೇವಿ ಮುಂದೆ ಸೀರೆಯುಟ್ಟು ಕುಣಿಯೋ ದೃಶ್ಯ ಮನಸ್ಸಿಗೆ ನಾಟುತ್ತೆ. ಬಳಿಕ ರಶ್ಮಿಕಾ- ಅಲ್ಲು ಅರ್ಜುನ್ ಸಂಭಾಷಣೆ ನೋಡುಗರ ಕಣ್ಣಲ್ಲಿ ನೀರು ತರಿಸುತ್ತೆ.
ಪುಷ್ಪ ಮೊದಲ ಭಾಗದಲ್ಲಿದ್ದ ಭನ್ವರ್ ಸಿಂಗ್ ಶೇಖಾವತ್ ಅಹಂ ಮಾತ್ರ ಸುಡಲ್ಲ ಈ ಬಾರಿ, ಆತನೇ ಆ ಅಹಂನಿಂದ ದಹಿಸಿ ಹೋಗ್ತಾನೆ. ಪುಷ್ಪ ಫ್ಯಾಮಿಲಿ ಒಂದಾಗುತ್ತೆ. ಪ್ರತಾಪ್ ರೆಡ್ಡಿ ಫ್ಯಾಮಿಲಿ ಎರಡು ತಲೆಗಳನ್ನ ಕಳೆದುಕೊಳ್ಳುತ್ತೆ. ಜಾಲಿ ರೆಡ್ಡಿ ಡಾಲಿ ಧನಂಜಯ ವಾಪಸ್ ಆಗ್ತಾರೆ. ಪುಷ್ಪ ಫ್ಯಾಮಿಲಿಗೆ ಬಾಂಬ್ ಇಟ್ಟು ಉಡಾಯಿಸ್ತಾರೆ ಶತ್ರು. ಆದ್ರೂ ಸಹ ಜಪಾನ್ ನಲ್ಲಿ ಪುಷ್ಪ ರ್ಯಾಂಪೇಜ್ ಬಾಕಿಯಿದೆ. ಅದೇ ಪುಷ್ಪ-3.
ಅಂದಹಾಗೆ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ ಈ ಚಿತ್ರದ ಮೂಲಕ ಫಸ್ಟ್ ಟೈಂ ಒಳ್ಳೆಯ ಪರ್ಫಾಮರ್ ಅನಿಸಿಕೊಳ್ತಾರೆ. ಆಕೆಯ ಹಾವ, ಭಾವ, ಆಂಗಿಕ ಭಾಷೆ, ಡ್ಯಾನ್ಸ್, ಭಾವನಾತ್ಮಕ ಸನ್ನಿವೇಶಗಳು, ಗಂಡನ ಬಗ್ಗೆ ಇರೋ ಪ್ರೀತಿ, ಕಾಳಜಿ, ಗೌರವ ಎಲ್ಲವೂ ವ್ಹಾವ್ ಫೀಲ್ ತರಿಸುತ್ತೆ. ಇನ್ನು ಅಲ್ಲು ಅರ್ಜುನ್ ನಟನೆ ಬಗ್ಗೆ ದೂಸ್ರ ಮಾತೇ ಇಲ್ಲ. ಹಿ ಈಸ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಗಂಡನಾಗಿ, ಸ್ಮಗ್ಲರ್ ಆಗಿ, ರೂಲ್ ಮಾಡೋ ಪುಷ್ಪರಾಜ್ ಆಗಿ, ನೋಡುಗರನ್ನ ರಂಜಿಸೋ ಡ್ಯಾನ್ಸರ್, ಫೈಟರ್ ಆಗಿ ಎಲ್ಲರಿಂದ ಶಿಳ್ಳೆ ಚಪ್ಪಾಳೆ ತರಿಸುತ್ತಾರೆ. ಅಲ್ಲು ಅರ್ಜುನ್ ಅತ್ಯದ್ಭುತ ಕಲಾವಿದ ಅನ್ನೋದು ಮಗದೊಮ್ಮೆ ಸಾಬೀತಾಗಿದೆ. ಫಹಾದ್ ಫಾಸಿಲ್ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಅನ್ನೋದು ಪ್ರತಿ ಫ್ರೇಮ್ ನಲ್ಲೂ ಎದ್ದು ಕಾಣತ್ತೆ.
ಒಟ್ಟಾರೆ ಜಪಾನ್ ಹಾರ್ಬರ್ ದೃಶ್ಯದ ಮೂಲಕ ಪುಷ್ಪ-3 ಹಿಂಟ್ ನೀಡಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಅಫಿಶಿಯಲಿ ಪುಷ್ಪ ರ್ಯಾಂಪೇಜ್ ಮುಂದುವರೆಯಲಿದೆ ಅನ್ನೋದನ್ನ ಅಧಿಕೃತವಾಗಿ ಅನೌನ್ಸ್ ಕೂಡ ಮಾಡಲಾಗಿದೆ. ಲಿರಿಕಲ್ ಸಾಂಗ್ಸ್ ಸಪ್ಪೆ ಅನಿಸಿದ್ರೂ, ಬಿಗ್ ಸ್ಕ್ರೀನ್ ನಲ್ಲಿ ಕಥೆ ಸಮೇತ ವಿಡಿಯೋ ಸಾಂಗ್ಸ್ ಕಣ್ಮನ ತಣಿಸುತ್ತವೆ. ಒಟ್ಟಾರೆ ಪುಷ್ಪರಾಜ್ ಮಸ್ತ್ ಮನರಂಜನೆ ಕೊಡೋ ಭಲೇ ಕಳ್ಳನಾಗಿ ವಿಜೃಂಭಿಸ್ತಿದ್ದಾರೆ. ಕೊಡೋ ಕಾಸಿಗೆ ಮೋಸ ಇಲ್ಲ. ಸಿನಿಮಾ ಲೆಂಥ್ ಇದ್ದರೂ ಫ್ಯಾಮಿಲಿ ಸಮೇತ ಎಲ್ಲರೂ ನೋಡಬಹುದು.
ಗ್ಯಾರಂಟಿ ನ್ಯೂಸ್ ರೇಟಿಂಗ್: 3.5/5
- ಬೀರಗಾನಹಳ್ಳಿ ಲಕ್ಷ್ಮೀ ನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್