ತೆಲುಗು ಖ್ಯಾತ ನಟಿ ಪೂನಂ ಕೌರ್, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಲೈಂಗಿಕ ಆರೋಪ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸುವಂತೆ ಕಲಾವಿದರ ಸಂಘ (MAA) ಗೆ ಒತ್ತಾಯಿಸಿದ್ದಾರೆ. ನಟಿ ಈ ಹಿಂದೆ ನಿರ್ದೇಶಕರ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಈ ವಿಷಯವನ್ನು ಅಧಿಕಾರಿಗಳು ಅಷ್ಟಾಗಿ ಗಮನಿಸಿರಲಿಲ್ಲ. ನೃತ್ಯ ನಿರ್ದೇಶಕ‘ ಜಾನಿ ಮಾಸ್ಟರ್ ವಿರುದ್ಧ ಕೇಸ್ ದಾಖಲಿಸುತ್ತಿದ್ದಂತೆ, ಇದೀಗ ಪೂನಂ ಧ್ವನಿ ಎತ್ತಿದ್ದಾರೆ.
ಜಾನಿ ಮಾಸ್ಟರ್ ಪ್ರಕರಣ ಮುಂದಿಟ್ಟುಕೊಂಡು ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ವಾಗ್ದಾಳಿಯನ್ನು ಮಾಡಿದ್ದಾರೆ ಪೂನಂ ಕೌರ್. ‘ನಾನು ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ದೂರು ನೀಡಿದಾಗ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಚಿತ್ರರಂಗದ ಹಿರಿಯರಿಗೆ ನಾನು ದೂರು ನೀಡಿದ್ದೆ, ಆದರೆ ಪ್ರಯೋಜನವಾಗಲಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳಬೇಕು ಈ ವಿಚಾರದ ಕುರಿತು ಚರ್ಚೆಯಾಗಬೇಕು. ಚಿತ್ರರಂಗದ ದೊಡ್ಡ ದೊಡ್ಡವರು ತ್ರಿವಿಕ್ರಮ್ ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಬೇಕು’ ಎಂದು ಎಕ್ಸ್ ಖಾತೆಯಲ್ಲಿ ಪೂನಂ ಕೌರ್ ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ಅಭಿನಯದ ಬಂಧು ಬಳಗ ಚಿತ್ರದಲ್ಲಿ ಕೂಡ ಪೂನಂ ಕೌರ್ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿರುವ ಪೂನಂ ಕೌರ್ ಪ್ರಜ್ವಲ್ ರೇವಣ್ಣ ವಿರುದ್ಧವೂ ಈ ಹಿಂದೆ ಸಿಡಿದೆದಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಆಕ್ರೋಶವನ್ನ ಹೊರ ಹಾಕಿದ್ದರು. 2800ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿವೆ. ಮಹಿಳೆಯರಿಗೆ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ ಎಂದಿದ್ದರು. ಇಂತವರಿಗೆ ವೋಟ್ ಹಾಕ್ಬೇಡಿ ಎಂದು ಪೂನಂ ಕೌರ್ ಹೇಳಿದ್ದರು. ಜನ ತಿರುಗಿ ಬೀಳುವವರಿಗೂ ಇಂತವರನ್ನ ಶಿಕ್ಷಿಸಲು ಸಾಧ್ಯವೇ ಇಲ್ಲ . ಮಹಿಳೆಯ ಮೇಲೆ ದೌರ್ಜನ್ಯ ಮಾಡೋರನ್ನು ಗಲ್ಲಿಗೇರಿಸಿ ಎಂದು ನಟಿ ಕಿಡಿಕಾರಿದ್ದರು.
ನಟಿ ಪೂನಂ ಕೌರ್ ಟಾಲಿವುಡ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ರು. ಆದರೆ ಈಗ ನಟಿ ಅವಕಾಶಗಳೇ ಸಿಗುತ್ತಿಲ್ಲ. ಈ ಕಾರಣದಿಂದಾಗಿ ನಟಿ ಇಂಡಸ್ಟ್ರಿಯಿಂದ ದೂರ ಸರಿದಿದ್ದಾರೆ. ಆದ್ರೆ ಪೂನಂ ಕೌರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಸಿನಿಮಾಗಳ ಜೊತೆಗೆ ರಾಜಕೀಯದ ಬಗ್ಗೆ ಕೂಡ ಕಮೆಂಟ್ ಮಾಡುತ್ತಿರುತ್ತಾರೆ.