ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯಿಸುತ್ತಿರುವ “ಟಾಕ್ಸಿಕ್” ಸಿನಿಮಾದಿಂದ ದಿನಕ್ಕೊಂದು ಹೊಸ ಅಪ್ಡೇಟ್ ಕೇಳಿಬರುತ್ತಿದೆ. “ಟಾಕ್ಸಿಕ್“ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಅನ್ನುವ ಸುದ್ದಿ ಕೇಳಿಬರುತ್ತಿತು. ಕರೀನಾ ಅವರು ಯಶ್ ಜೊತೆ ನಟಿಸುವ ಆಸೆ ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡ್ರು. ಇದರಂತೆ ಅವರಿಗೆ ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟಿಸುವ ಅವಕಾಶ ಸಹ ಸಿಕ್ಕಿತು. ಆದ್ರೆ ಈಗ ಕರೀನಾ ಅವ್ರು ಈ ಚಿತ್ರದಲ್ಲಿ ಕಾಣಿಸಿಕೊಳ್ಳೊದಿಲ್ಲ ಎಂದು ವರದಿ ಆಗಿದೆ.
ಟಾಕ್ಸಿಕ್ ಒಂದು ಒಡಹುಟ್ಟಿದವರ ನಡುವಿನ ಬಲವಾದ ಬಾಂಧವ್ಯವನ್ನು ಕೇಂದ್ರೀಕರಿಸಿದೆ. ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ ಈಗ ಅವರು ಈ ಚಿತ್ರದಿಂದ ಹೊರಗಡೆ ಬಂದಿದ್ದಾರೆ. ಕರೀನಾ ಹಾಗೂ ಯಶ್ ಅವರ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಚಿತ್ರದಿಂದ ಹೊರಬಂದಿದ್ದಾರೆ. ಈ ಪಾತ್ರಕ್ಕಾಗಿ ಮತ್ತೊಂದು ಸ್ಟಾರ್ ನಟಿಯ ಹುಡುಕಾಟದಲ್ಲಿದ್ದಾರೆ ಚಿತ್ರತಂಡ ಎಂದು ಹೇಳಾಗ್ತಿದೆ.