ರಾಕಿ ಭಾಯ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಆದರೂ ಏನು ಎಂಬುವುದು ಅಭಿಮಾನಿಗಳಲ್ಲಿ ಕುತೂಹಲ ಇದೆ. KGF ಸಿನಿಮಾದ ನಂತರ ಯಶ್ ಮತ್ತೆ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು ಬೇರೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಟಾಕ್ಸಿಕ್ ಸಿನಿಮಾ ಅಪ್ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್ ಕಾತುರದಿಂದ ಇದ್ದಾರೆ. ಇದೀಗ ಲೇಟೆಸ್ಟ್ ಅಪ್ಡೇಟ್ವೊಂದು ಸಿಕ್ಕಿದ್ದು ಮೂವಿಗೆ ವಿಲನ್ ರೋಲ್ ಯಾರೆಂಬುದು ರಿವೀಲ್ ಆಗಿದೆ.
ಈಗಾಗಲೇ ಟಾಕ್ಸಿಕ್ ಮೂವಿಯ ವಿಲನ್ ರೋಲ್ ಫಿಕ್ಸ್ ಆಗಿರುವ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಶೂಟಿಂಗ್ ಬೇರೆ ಬೇರೆ ಸ್ಥಳಗಳಲ್ಲಿ ಭರದಿಂದ ಸಾಗುತ್ತಿದೆ. ತಾರಾಗಣ ವಿಚಾರವಾಗಿ ಟಾಕ್ಸಿಕ್ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಆದರೂ ಈ ಸಂಬಂಧ ಚಿತ್ರತಂಡದವರು ಎಲ್ಲೂ ಕೂಡ ಅಧಿಕೃತವಾಗಿ ತಾರಾಗಣದ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಕೇಳಿ ಬಂದಿದ್ದವು. ನಿರ್ದೇಶಕಿ ಗೀತಾ ಅವರು ಶೂಟಿಂಗ್ನಲ್ಲಿ ಫುಲ್ ಬ್ಯುಸಿ ಇದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಟಾಕ್ಸಿಕ್ ಸಿನಿಮಾದ ಖಳನಾಯಕ ಯಾರು? ಎನ್ನುವ ಕುತೂಹಲದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಮಲಯಾಳಂನ ಖ್ಯಾತ ನಟ ಟೊವಿನೊ ಥಾಮಸ್ ಅವರು ಟಾಕ್ಸಿಕ್ನಲ್ಲಿ ವಿಲನ್ ಆಗಿ ಅಭಿನಯ ಮಾಡಲಿದ್ದಾರಂತೆ. ಈ ಸಂಬಂಧ ಟೊವಿನೊ ಥಾಮಸ್ ಅವರ ಜೊತೆ ನಿರ್ದೇಶಕಿ ಒಂದು ಸುತ್ತಿನ ಮಾತಕತೆ ನಡೆಸಿದ್ದಾರೆ. ಇವರೇ ಸಿನಿಮಾದಲ್ಲಿ ನಟಿಸೋದು ಕನ್ಫರ್ಮ್ ಎಂದು ಹೇಳಲಾಗಿದೆ.