ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕರುನಾಡ ಜನತೆ ಬುದ್ದಿವಂತ ಅಂತ ಒಪ್ಕೊಂಡಾಗಿದೆ. ಸೂಪರ್ ಸ್ಟಾರ್ ಉಪ್ಪಿನಾ ತಲೆ ಮೇಲೆ ಹೊತ್ತು ಮೆರೆಸಿದ್ದು ಆಗಿದೆ. ಆದರೆ, ಈಗ ಸ್ವತಃ ಉಪ್ಪಿ ‘ಯಾವನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೆ ಚೆನ್ನಾಗಿರಲ್ಲ’ ಅಂತ ಗರಂ ಆಗಿದ್ದಾರೆ. ಅರ್ರೇ ಉಪ್ಪಿ ಯಾಕ್ ಗರಂ ಆದರು ಅಂತೀರಾ ಅದಕ್ಕೆ ಕಾರಣ ಇಲ್ಲಿದೆ ನೋಡಿ
2024ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆದ್ದು ಗಹಗಹಿಸಿದ್ದು ನಿಮಗೆಲ್ಲ ಗೊತ್ತೆಯಿದೆ. ಸಾಕಷ್ಟು ಭಾರಿ ಸೋಲುಂಡರೂ ಛಲಬಿಡದ ಗಬ್ಬರ್ ಸಿಂಗ್ ಪವನ್ ಈ ಭಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದನ್ನು ಮುಂದಿಟ್ಟುಕೊಂಡು ನೆಟ್ಟಿಗರು ಉಪೇಂದ್ರ ಅವರ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಕನ್ನಡಿಗರು ಉಪೇಂದ್ರರನ್ನು ಗೆಲ್ಲಿಸೋದು ಯಾವಾಗ?’ ಅಂತ ಟ್ರೋಲ್ ಪುಟದಲ್ಲಿ ಪ್ರಶ್ನೆ ಮಾಡಲಾಗಿದೆ. ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಉಪೇಂದ್ರ ಅವರು ಏನ್ ಹೇಳಿದ್ದಾರೆ ಗೊತ್ತಾ ?
ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ…ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದ್ದೀರಾ.. ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ. ನಾನ್ ಗೆಲ್ಲಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ, ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತಾ ನೀವು ಯೋಚನೆ ಮಾಡ್ರಿಪ್ಪೋ ಎಂದರು. ಮುಂಬರುವ ಎಲೆಕ್ಷನ್ನಲ್ಲಿ ನನಗ್ ಕೆಲ್ಸಾ ಕೋಡ್ತೀರಾ ಅಂದ್ರೆ ನಿಲ್ತೀನಿ. ಆಗ್ಲೂ ನೀವ್ ಎಮೋಸನಲ್ ಪ್ರಚಾರ ಮಾಡ್ರಿ. ಸಭೆ ಸಮಾರಂಭ ಎಲ್ಲಾ ಮಾಡಿ, ಕಷ್ಟ ಪಡಿ. ಆಮೇಲೆ ಐದು ವರ್ಷ ನಿವೇನ್ ಬೇಕಾದ್ರೂ ಮಾಡ್ಕೊಳ್ಳಿ ನಾವು ಕೇಳೋಕೆ ಬರಲ್ಲ. ಅಂದ್ರೆ ಉಸ್ ಏನ್ ಬರೀಬೇಕೋ ಅಂತಾ ಗೊತ್ತಾಗ್ತಿಲ್ಲ. ಈ ದಡ್ಡ ನನ್ ಮಗಂಗೇ ಯಾವೋನಾದ್ರೂ ಇನ್ನು ಮೇಲೆ ಬುದ್ದಿವಂತ ಅಂದ್ರೆ ಅಷ್ಟೇ ಸೆಂದಾಗಿರಕ್ಕಿಲ್ಲಾ ಎಂದು ನಟ ಉಪೇಂದ್ರ ಬರೆದುಕೊಂಡಿದ್ದಾರೆ.
ನಿಮಗೀಗಾಗಲೇ ಗೊತ್ತಿರುವಂತೆ ‘ರಿಯಲ್ ಸ್ಟಾರ್’ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದರು. ತಾವು ಖಾದಿ ತೊಟ್ಟು ಅಖಾಡಕ್ಕೆ ಇಳಿಯದೇ ತಮ್ಮ ಪಕ್ಷದಿಂದ ಸ್ಪರ್ಧಿಗಳನ್ನ ಚುನಾವಣಾ ಕಣಕ್ಕಿಳಿಸುತ್ತಿದ್ದರು. ಅದರಲ್ಲಿ ಅನೇಕರು ಗೆಲುವಿನ ನಗೆ ಬೀರಿದ್ದು ಉಂಟು. ಆದರೆ, ಸ್ವತಃ ಉಪ್ಪಿಗೆ ರಾಜಕೀಯ ಇಷ್ಟವಿಲ್ಲ ಬದಲಾಗಿ ಪ್ರಜಾಕೀಯ ಅಸ್ತಿತ್ವಕ್ಕೆ ಬರಬೇಕು. ಪ್ರಜೆಗಳೇ ರಾಜರುಗಳಾಗ್ಬೇಕು, ಪ್ರಜೆಗಳು ಹೇಳಿದಂತೆ ಚುನಾಯಿತ ಅಭ್ಯರ್ಥಿಗಳು ಕೆಲಸ ಮಾಡಬೇಕು ಅನ್ನೋದು ಬುದ್ದಿವಂತನ ನಿಲುವು. ಆದರೆ, ಉಪ್ಪಿಯ ಕಲ್ಪನೆಯಂತೆ ಪ್ರಜಾಕೀಯವನ್ನ ಅಸ್ತಿತ್ವಕ್ಕೆ ತರಲು ಸಾಧ್ಯವಾಗ್ತಿಲ್ಲ. ರಿಯಲ್ ಸ್ಟಾರ್ ಐಡಿಯಾಲಜಿನಾ ಕೆಲವರು ಒಪ್ತಾಯಿಲ್ಲ. ರಾಜಕೀಯದಲ್ಲಿ ಬುದ್ದಿವಂತನ ಸ್ಟ್ರಾಟಜಿ ವರ್ಕ್ ಆಗಲ್ಲ, ಪ್ರಜೆಗಳು ರಾಜರಾಗುವುದನ್ನ ಯಾರೂ ಒಪ್ಪಲ್ಲ ಅಂತ ರಾಜಕೀಯ ಪಡಸಾಲೆಯಲ್ಲೇ ಮಾತನಾಡಿಕೊಳ್ತಿದ್ದಾರೆ. ಸದ್ಯಕ್ಕೆ ಪ್ರಜಾಕೀಯಕ್ಕೆ ಬೆಂಬಲ ಸಿಗದೇ ಇರ್ಬೋದು, ಇನ್ ಫ್ಯೂಚರ್ ಬುದ್ದಿವಂತನ ಪಾಲಿಟಿಕ್ಸ್ಗೆ ಪವರ್ ಬರುತ್ತೆ ಅನ್ನೋದು ರಿಯಲ್ ಸ್ಟಾರ್ ಫ್ಯಾನ್ಸ್ ಅಭಿಪ್ರಾಯ