ಕಿಚ್ಚ ಸುದೀಪ್ ನಟನೆಯ ವೀರ ಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ “ಜೆರುಶಾ” ಈಗ ನಾಯಕಿಯಾಗಿ ಸಿನಿಮಾರಂಗವನ್ನ ಪ್ರವೇಶಿಸುತ್ತಿದ್ದಾರೆ. ಆಕಾಶ್, ಅರಸು ಮುಂತಾದ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಜೆರುಶಾ ನಟಿಸಲಿದ್ದಾರೆ.
ಇತ್ತೀಚೆಗಷ್ಟೇ “ಅಪರೂಪ” ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದರು. ಮಹೇಶ್ ಬಾಬು ಅವರು ಇದೀಗ ರಕ್ಷಿತ್ ಎಂಬುವವರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಸ್ಯಾಂಡಲ್ವುಡ್ಗೆ ಮೆರವಣಿಗೆ ಸಿನಿಮಾ ಮೂಲಕ ಐಂದ್ರಿತಾ ರೈ, ಚಿರು ಸಿನಿಮಾ ಮೂಲಕ ಕೃತಿ ಕರಬಂಧ, ಕ್ರೇಜಿ ಬಾಯ್ ಮೂಲಕ ಆಶಿಕಾ ರಂಗನಾಥ ಹೀಗೆ ಹಲವು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಹೆಗ್ಗಳಿಕೆ ಮಹೇಶ್ ಬಾಬು ಅವರಿಗೆ ಸೇರುತ್ತೆ.
ಜೆರುಶಾ ಅವರಿಗೆ ಬಣ್ಣದ ಲೋಕ ಹೊಸದೇನಲ್ಲ. ಬಾಲನಟಿಯಾಗಿ ನಟಿಸಿ ಜಾಹೀರಾತುಗಳ ಹಾಗೂ ನಿಸಿಮಾ ರಂಗಭೂಮಿಯಲ್ಲಿ ಜೆರುಶಾ ಸಕ್ರಿಯರಾಗಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ.