ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ. ಇವರ ಕೆಲವು ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟುವಲ್ಲಿ ಎಡವಿತ್ತು. ಇತ್ತೀಚಿಗೆ ಅಷ್ಟೇ ತೆರೆ ಕಂಡಂತ “ಫ್ಯಾಮಿಲಿ ಸ್ಟಾರ್” ಸಿನಿಮಾ ಸೋಲನ್ನು ಕಂಡಿತ್ತು. ಈಗ ಇನ್ನೊಂದು ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ ವಿಜಯ್.
ಈ ಹಿಂದೆ ಟಾಲಿವುಡ್ ನಲ್ಲಿ ‘ರಾಜಾ ವರು ರಾಣಿ ಗಾರುʼ ಸಿನಿಮಾವನ್ನು ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ರವಿಕಿರಣ್ ಕೋಲ ಅವರೊಂದಿಗೆ ದೇವರಕೊಂಡ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ. ಈ ಸಿನಿಮಾ ಒಂದು ಆಕ್ಷನ್ ಸಿನಿಮಾವಾಗಲಿದ್ದು, ದಿಲ್ ರಾಜು ಅವರು ನಿರ್ಮಾಣ ಮಾಡಲಿದ್ದಾರೆ.