ತಮಿಳು ಚಿತ್ರರಂಗದ ಸ್ಟಾರ್ ನಟ ಇಳಯ ದಳಪತಿ ವಿಜಯ್ ವೈಯಕ್ತಿಕ ಬದುಕಿನ ಬಗ್ಗೆ ಬಹಳ ದಿನಗಳಿಂದ ಗಂಭೀರ ಚರ್ಚೆಯಾಗುತ್ತಿದೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ವಿಜಯ್ ಹಾಗೂ ತ್ರಿಷಾ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದಳಪತಿ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಿ, ತ್ರಿಶಾರನ್ನು ವಿವಾಹವಾಗಲಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಹರಿದಾಡುತ್ತಿದೆ ಆದರೆ ಈ ಸುದ್ದಿ ಬಗ್ಗೆ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದರೆ, ಅದ್ಯಾವಾಗ ದಳಪತಿ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿರುವ ಫೋಟೋ ಲೀಕ್ ಆಯ್ತೋ ಆಗ ಇವರಿಬ್ಬರ ಬಗ್ಗೆ ಮತ್ತೆ ನಾನಾ ರೀತಿಯ ಊಹಾಪೋಹಗಳು ಹಬ್ಬಿವೆ. ವಿಜಯ್ ಹಾಗೂ ತ್ರಿಶಾ ಡೇಟಿಂಗ್ ಮಾಡುತ್ತಿದ್ದಾರೆಂಬ ಚರ್ಚೆ ಶುರುವಾಗಿದೆ. ಈಗ ಇವರಿಬ್ಬರ ಸಂಬಂಧದ ಬಗ್ಗೆ ಸುಚಿ ಲೀಕ್ಸ್ ಖ್ಯಾತಿಯ ಗಾಯಕಿ ಸುಚಿತ್ರಾ ಹೊಸ ಬಾಂಬ್ ಸಿಡಿಸಿದ್ದಾರೆ.
ದಳಪತಿ ವಿಜಯ್ ಇತ್ತೀಚೆಗಷ್ಟೇ ತಮ್ಮ 50ನೇ ಬರ್ತ್ಡೇಯನ್ನು ಆಚರಿಸಿಕೊಂಡಿದ್ದರು. ಆ ವೇಳೆ ತ್ರಿಷಾ ಜೊತೆ ದಳಪತಿ ವಿಜಯ್ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿ ಇಬ್ಬರೂ ಲಿಫ್ಟ್ನಲ್ಲಿ ಇಳಿಯುವಾಗ ವಿಜಯ್ ಜೊತೆ ತ್ರಿಷಾ ಈ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೊ ಹಿಂದೆ ದೊಡ್ಡ ಕಥೆಯೇ ಇದೆ. ಇದನ್ನು ಯಾಕೆ ಸೋರಿಕೆ ಮಾಡಲಾಯಿತು? ಇದರ ಹಿಂದಿನ ಉದ್ದೇಶವೇನು ಅನ್ನೋದನ್ನು ಸುಚಿತ್ರಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಹಾಗೂ ತ್ರಿಷಾ ಬಗ್ಗೆ ಸುಚಿತ್ರಾ ಗಂಭೀರ ಆರೋಪ ಮಾಡಿದ್ದಾರೆ. ದಳಪತಿ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾರೆ. ವಿಜಯ್ ತಮ್ಮ ಪತ್ನಿಯಿಂದ ದೂರು ಉಳಿದು ವರ್ಷಗಳೇ ಕಳೆದಿವೆ. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಹಾಗೇ ಎಂಜಿಆರ್ ಹಾಗೂ ಜಯಲಲಿತಾರಂತೆಯೇ ತ್ರಿಶಾ ಜೊತೆ ಬಾಂಧವ್ಯ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಭವಿಷ್ಯ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ವಿಜಯ್ ಹಾಗೂ ಪತ್ನಿ ಸಂಗೀತಾ ನಡುವಿನ ಭಿನ್ನಾಭಿಪ್ರಾಯ ತೀರ ಚಿಕ್ಕದ್ದು, ಅವುಗಳನ್ನು ಬಗೆ ಹರಿಸಿಕೊಳ್ಳಬಹುದು. ವಿಜಯ್ ಜೊತೆಗಿರುವ ತ್ರಿಷಾ ಫೋಟೋ ಬೇಕಂತಲೇ ಲೀಕ್ ಆಗಿದೆ. ಇಬ್ಬರ ಸಂಬಂಧವನ್ನು ಜಗತ್ತಿಗೆ ತಿಳಿಸುವ ಪ್ರಯತ್ನದಲ್ಲಿ ಇದು ಹೊರಬಂದಿದ್ದು, ಆ ಉದ್ದೇಶವೂ ಈಡೇರಿದೆ ಎಂದು ಆರೋಪ ಮಾಡಿದ್ದಾರೆ. ಹಾಗೇ ತ್ರಿಷಾಳನ್ನು ನಾನು ದ್ವೇಷ ಮಾಡುತ್ತೇನೆ. ಆದರೆ, ದಳಪತಿ ವಿಜಯ್ ಇಷ್ಟ ಪಡುತ್ತೇನೆ ಎಂದಿದ್ದಾರೆ. “ನನಗೆ ತ್ರಿಷಾ ಕಂಡರೆ ಇಷ್ಟವಿಲ್ಲ. ನಾನು ಇದನ್ನು ವಸ್ತುನಿಷ್ಠವಾಗಿ ಹೇಳುತ್ತೇನೆ. ನನ್ನ ಈ ಅಭಿಪ್ರಾಯಗಳಿಗೆ ಬಣ್ಣ ಕೊಡಲು ಬಿಡುವುದಿಲ್ಲ. ಆದರೆ, ನನಗೆ ವಿಜಯ್ ತುಂಬಾ ಇಷ್ಟ. ನಾನು ಯಾವ ಪಕ್ಷವೂ ಇರದೆ ಪ್ರಾಮಾಣಿಕವಾಗಿ ಅಭಿಪ್ರಾಯ ಕೊಡುವುದಕ್ಕೆ ಇಷ್ಟ ಪಡುತ್ತೇನೆ. ವಿಜಯ್ ತನ್ನ ಹೆತ್ತವರು ಮತ್ತು ಹೆಂಡತಿಯಿಂದ ಬೇರ್ಪಟ್ಟು ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದ್ದಾನರೆ. ಒಂಟಿಯಾಗಿದ್ದರೂ ಆತ್ಮಾವಲೋಕನ ಮಾಡಿಕೊಂಡಿಲ್ಲ.” ಎಂದು ಗಾಯಕಿ ಸುಚಿತ್ರಾ ಹೇಳಿದ್ದಾರೆ.
ಸುಚಿತ್ರಾ ಹೇಳಿಕೆಯನ್ನು ದಳಪತಿ ವಿಜಯ್ ಅಭಿಮಾನಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಇವರ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ . ಹಳೆ ಫೋಟೊವನ್ನು ವೈರಲ್ ಮಾಡಿ ಅವರ ವರ್ಚಸ್ಸಿಗೆ ಧಕ್ಕೆ ತರುವುದಕ್ಕೆ ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ರಾಜಕೀಯ ಎಂಟ್ರಿ ಕೊಟ್ಮೇಲೆ ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.