- ದರ್ಶನ್ ಬಂಧನ ಬೆನ್ನಲ್ಲೆ ನಿನ್ನೆ ದರ್ಶನ್ ಇನ್ಸ್ಟಾ ಅನ್ಫಾಲೋ ಮಾಡಿ ವಿಜಯಲಕ್ಷ್ಮೀ
- ಇನ್ಸ್ಟಾಗ್ರಾಮ್ ಅಕೌಂಟ್ನೇ ಡಿಲೀಟ್ ಮಾಡಿದ ವಿಜಯಲಕ್ಷ್ಮಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರ ನಡೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ. ಪತಿ ದರ್ಶನ್ರನ್ನ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಪತಿ ದರ್ಶನ್ರನ್ನ ಸೋಷಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿ ಪ್ರೊಫೈಲ್ ಪಿಕ್ ರಿಮೂವ್ ಮಾಡಿದ್ದ ವಿಜಯಲಕ್ಷ್ಮಿ, ಈಗ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನೇ ಡಿಲೀಟ್ ಮಾಡಿದ್ದಾರೆ. ಹೀಗಾಗಿ ವಿಜಯಲಕ್ಷ್ಮಿ ನಡೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಹೌದು, ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಕ್ಟಿವ್ ಆಗಿದ್ದರು. ಆಗಾಗ ತಮ್ಮ ಫೋಟೊಗಳನ್ನು ಹಾಕಿ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರುತ್ತಿದ್ದರು. ಇನ್ನೂ ಪತಿ ದರ್ಶನ್ ಜೊತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಹಾಗೇ ಹೆಚ್ಚಾಗಿ ಮಗನೊಂದಿಗೆ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಿದ್ದೂ ಇದೆ. ಈಗ ಇನ್ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಷ್ಟಕ್ಕೂ, ವಿಜಯಲಕ್ಷ್ಮಿ ಇನ್ಸ್ಟಾಗ್ರಾಂ ಖಾತೆಯನ್ನು ಯಾಕೆ ಡಿಲೀಟ್ ಮಾಡಿದ್ರು? ಅನ್ನೋದು ಈಗ ಯಕ್ಷ ಪ್ರಶ್ನೆಯಾಗಿದೆ. ಈ ಮೂಲಕ ದರ್ಶನ್ ಅವರಿಂದ ದೂರು ಉಳಿಯುವುದಕ್ಕೆ ವಿಜಯಲಕ್ಷ್ಮಿ ನಿರ್ಧರಿಸಿದ್ದಾರಾ? ಇಲ್ಲಾ ದರ್ಶನ್ ಹಾಗೂ ತಮ್ಮ ಪುತ್ರ ವಿನೀಶ್ ಫೋಟೊಗಳು ಇರುವುದರಿಂದ ಈ ಪರಿಸ್ಥಿತಿಯಲ್ಲಿ ಬಳಕೆಯಾಗದೇ ಇರಲಿ ಅಂತ ಹೀಗಿ ಮಾಡಿದ್ರಾ? ಸದ್ಯಕ್ಕಂತೂ ನಿಗೂಢ.
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದ ಬಳಿಕ ವಿಜಯಲಕ್ಷ್ಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾದಂತೆ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ವಿಜಯಲಕ್ಷ್ಮಿ ಜೊತೆ ಫೋನ್ನಲ್ಲಿ ಮಾತಾಡಿದ್ದರು ಎನ್ನಲಾಗಿದೆ. ಈ ವೇಳೆ ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದರು ಎಂದು ಹೇಳಲಾಗಿತ್ತು. ಸದ್ಯ ಪತಿಯ ಮೇಲಿರುವ ಆರೋಪದ ಬಗ್ಗೆ ವಿಜಯಲಕ್ಷ್ಮಿ ನಿಲುವೇನು? ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.