ಸ್ಯಾಂಡಲ್ವುಡ್ನ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಕಳೆದ ಹಲವು ತಿಂಗಳಿಂದ ವಿಜಯಲಕ್ಷ್ಮಿ ಅವರು ತಮ್ಮ ಪತಿಯ ಕೊಲೆ ಕೇಸ್ನಲ್ಲಿ ಬ್ಯುಸಿಯಾಗಿದ್ದರು. ದರ್ಶನ್ ಅವರನ್ನು ಬೇಲ್ ಮೇಲೆ ಬಿಡಿಯಲು ಕೋರ್ಟ್, ದೇವಸ್ಥಾನಗಳನ್ನು ಅಲೆದಿದ್ದ ವಿಜಯಲಕ್ಷ್ಮಿ ಇದೀಗ ದರ್ಶನ್ ರೆಗ್ಯುಲರ್ ಬೇಲ್ ಸಿಕ್ಕಿ ರಿಲೀಫ್ ಆಗಿದ್ದಾರೆ. ಇದೀಗ ಹೊಸ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ವಿಜಯಲಕ್ಷ್ಮಿ ಲುಕ್ಗೆ ಫ್ಯಾನ್ಸ್ ನಾನಾ ಕಾಮೆಂಟ್ಗಳನ್ನು ಶೇರ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ವಿಜಯಲಕ್ಷ್ಮಿ ತಮ್ಮ ಮುದ್ದಿನ ನಾಯಿ ಮರಿಯನ್ನು ಹಿಡಿದು, ಮುದ್ದಾದ ಪೋಟೋ ಒಂದನ್ನು ಶೇರ್ ಮಾಡಿದ್ದರು. ದರ್ಶನ್ ಜೈಲಿನಿಂದ ಬಿಡುಗಡೆಯಾದ ನಂತರ ಈ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದರು. ಇದೀಗ ಮತ್ತೊಂದು ಫೋಟೋ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.
ಜಗಮಗಿಸುವ ಲೈಟ್ಸ್ ಗಳ ಮಧ್ಯೆ ಹಸಿರು ಡ್ರೆಸ್ ಧರಿಸಿ, ಹಸಿರು ಬ್ಯಾಗ್ ಹಿಡಿದು ವಿಜಯಲಕ್ಷ್ಮೀ ಪೋಸ್ ನೀಡಿದ್ದು, ಎರಡು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ನಾನಾ ಕಾಮೆಂಟ್ ಮಾಡಿದ್ದು, ನಮ್ಮ ನೆಚ್ಚಿನ ಅತ್ತಿಗೆ ಎಂದು ಹಾಡಿ ಹೊಗಳಿದ್ದಾರೆ. ಅತ್ತಿಗೆ ಸೂಪರ್, ಕ್ಯೂಟ್ ಅತ್ತಿಗೆ, ದೇವತೆ, ಅತ್ತಿಗೆ ನೀವು ಕಲಿಯುಗದ ದೇವತೆ, ನಮ್ಮ ಮನದ ದೇವತೆ, ಡಿ ಬಾಸ್ ಕ್ವೀನ್, ನೀವು ಯಾವಾಗ್ಲೂ ಖುಷಿಯಾಗಿರಿ, ನಿಜವಾದ ಪ್ರೀತಿಗೆ ಅರ್ಥವೇ ನೀವು ಎಂದು ಕಾಮೆಂಟ್ ಮಾಡುವ ಮೂಲಕ ವಿಜಯಲಕ್ಷ್ಮಿ ಅವರನ್ನು ಹಾಡಿ ಕೊಂಡಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc