- ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಮೋನಿಷಾ ಸಖತ್ ಸುದ್ದಿಯಲ್ಲಿ ಇದ್ದಾರೆ.
- ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಮೋನಿಷಾ ವಿಭಿನ್ನವಾದ ಡ್ರೆಸ್ ಧರಿಸುವ ಮೂಲಕ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿಇರುತ್ತಾರೆ ಸ್ಯಾಂಡಲ್ ವುಡ್ ಕರಿ ಚಿರತೆ ದುನಿಯ ವಿಜಯ್ ಮೊದಲ ಮಗಳು ಮೋನಿಷಾ. ದುನಿಯಾ ವಿಜಯ್ ಅವರ ಮುದ್ದಾದ ಇಬ್ಬರು ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಫ್ಯೂಚರ್ ಹೀರೋಯಿನ್ ಅಂತ ಮೋನಿಷಾಗೆ ದೃಷ್ಟಿ ತೆಗೆಯುತ್ತಿದ್ದಾರೆ ಸ್ಯಾಂಡಲ್ವುಡ್ ಅಭಿಮಾನಿಗಳು. ಆದರೆ ಈ ಮಧ್ಯೆ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಮೋನಿಷಾ ಸಖತ್ ಸುದ್ದಿಯಲ್ಲಿ ಇದ್ದಾರೆ.
ಮೋನಿಷಾ ಹೊಸ ಹೇರ್ ಸ್ಟೈಲ್ನಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಹೊಸ ಹೇರ್ ಸ್ಟೈಲ್ನಲ್ಲಿ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು “ವಾವ್ ನೂಡಲ್ಸ್ ಹೇರ್ ಸ್ಟೈಲ್, ಮೇಡಂ ನೀವು ಹೀಗೆ ನೋಡಿದರೆ ನಮ್ಮಂತ ಹುಡುಗರ ಗತಿ ಏನು, ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದೀರಿ ಮುದ್ದು ಎಂದು ಕಾಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ.
ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಮೋನಿಷಾ, ಶುಗರ್ ಬೈ ಮೋನಿಷಾ ಎಂಬ ಬ್ರಾಂಡ್ ಕೂಡ ನಿರ್ಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಈಕೆ ವಿಭಿನ್ನವಾದ ಡ್ರೆಸ್ ಧರಿಸುವ ಮೂಲಕ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.