ಅಮೃತಧಾರೆ ಸೀರಿಯಲ್ ಖ್ಯಾತಿಯ ಭೂಮಿಕಾ ಉರುಫ್ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನವಾಗಿದೆ. ಮನೆಕೆಲಸದಾಕೆಯೇ ಕೈಚಳಕ ತೋರಿದ್ದು, 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ಕದ್ದು ಪರಾರಿಯಾಗಿದ್ದಳು. ಇದೀಗ ಆಕೆಯ ಬಂಧನವಾಗಿದೆ. ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮನೆಕೆಲಸದಾಕೆ ಉಷಾಳನ್ನ ಬಂಧಿಸಿ, ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ.
ಛಾಯಾ ಸಿಂಗ್ ಕುಟುಂಬ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಮನೆಕೆಲಸಕ್ಕಾಗಿ ಉಷಾ ಎಂಬಾಕೆಯನ್ನ ನೇಮಿಸಿಕೊಂಡಿದ್ದರು. ಛಾಯಾ ಸಿಂಗ್ ತಾಯಿ ಚಮನಲತಾ ಮನೆಯಲ್ಲಿ ಉಷಾ ಹಲವು ವರ್ಷಗಳಿಂದ ಕೆಲಸ ಮಾಡ್ಕೊಂಡಿದ್ದು, ಕೊನೆಗೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ.
ಇನ್ನೂ ಛಾಯಾ ಸಿಂಗ್ ಬಗ್ಗೆ ಹೇಳೋದಾದರೆ, ಅಮೃತಧಾರೆ ಧಾರಾವಾಹಿ ಮೂಲಕ ಕನ್ನಡ ಸೀರಿಯಲ್ ಲೋಕಕ್ಕೆ ಬಹಳ ವರ್ಷಗಳಾದ್ಮೇಲೆ ಕಂಬ್ಯಾಕ್ ಮಾಡಿದ್ದಾರೆ. ಭೂಮಿಕಾ ಪಾತ್ರದ ಮೂಲಕ ಕರುನಾಡ ಮನೆಮಂದಿನಾ ರಂಜಿಸುತ್ತಿದ್ದಾರೆ. ಸೀರಿಯಲ್ ಜೊತೆ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾದಲ್ಲಿ ಛಾಯಾ ನಟಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ತೆರೆ ಕಾಣಲಿದೆ.