ಇತ್ತೀಚಿಗಷ್ಟೇ ನಿಧನರಾದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ನಿವಾಸಕ್ಕೆ ಸ್ಯಾಂಡಲ್ವುಡ್ ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಭೇಟಿ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಎಸ್ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಯಶ್ ದಂಪತಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಟ ಯಶ್ ಅವರ ಮುಂಬರುವ ಟಾಕ್ಸಿಕ್ ಚಿತ್ರ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಒಂದು ತಿಂಗಳಿಂದ ನಟ ಯಶ್ ಮುಂಬೈನಲ್ಲೇ ಇದ್ದು ನಿರಂತರವಾಗಿ ಶೂಟಿಂಗ್ನಲ್ಲಿ ಭಾಗಿಯಾಗ್ತಿದ್ದರು. ಇದೀಗ ನಟ ಕ್ರಿಸ್ಮಸ್ ಬ್ರೇಕ್ ತೆಗೆದುಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರಿಗೆ ಬರ್ತಿದ್ದಂತೆ ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿದರು. ಅವರ ಕುಟುಂಬಸ್ಥರ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು.
ಎಸ್ಎಂಕೆ ಕುಟುಂಬಸ್ಥರ ಭೇಟಿ ಬಳಿಕ ಮಾತಾಡಿದ ನಟ ಯಶ್, ಪ್ರತಿಯೊಬ್ಬರು ಕೂಡ ಎಸ್ ಎಂ ಕೃಷ್ಣ ಅವರನ್ನು ನೆನಪಿಸಿಕೊಳ್ಳಬೇಕು ಎಂದರು. ಅವರು ನಾಡಿಗೆ ಕೊಟ್ಟ ಕೊಡುಗೆ ಹಾಗೂ ಅವರ ಕೆಲಸಗಳು ಕಣ್ಣಿಗೆ ಕಾಣ್ತಿವೆ. ಅದ್ಬುತವಾಗಿ ಬದುಕಿದ ವ್ಯಕ್ತಿಯಾಗಿದ್ದು, ಅವರನ್ನು ತುಂಬಾ ಮಿಸ್ ಮಾಡಿಕೊಳ್ಳತ್ತೇನೆ. ಎಸ್ ಎಂ ಕೃಷ್ಣ ಅವರು ಯಾವಾಗಲೂ ನಮ್ಮ ಬೆಳವಣಿಗೆಯನ್ನ ಬಯಸುತ್ತಿದ್ದವರು. ಬೆಳವಣಿಗೆ ಅವರ ವಿಚಾರಧಾರೆಯಾಗಿತ್ತು. ಎಸ್ಎಂಕೆ ಅವರು ಸಿಕ್ಕಾಗಲೆಲ್ಲಾ ಅಭಿವೃದ್ಧಿಯ ಬಗ್ಗೆ ಹೆಚ್ಚು ಮಾತನಾಡ್ತಿದ್ದರು. ಎಸ್ ಎಂ ಕೃಷ್ಣ ಅವರದ್ದು ಧೀಮಂತ ವ್ಯಕ್ತಿತ್ವವಾಗಿತ್ತು. ತುಂಬಾ ದಿನಗಳ ಹಿಂದೆ ನಾನು ಅವರನ್ನ ಭೇಟಿಯಾಗಿದ್ದೆ ಎಂದು ಎಸ್ಎಂಕೆ ಜೊತೆಗಿನ ಒಡನಾಟದ ಬಗ್ಗೆ ನಟ ಯಶ್ ಮಾತಾಡಿದರು.