- ಭೀಮ ಚಿತ್ರದ ಮಗದೊಂದು ಗೀತೆ ರಿಲೀಸ್
ಬ್ಲ್ಯಾಕ್ ಕೋಬ್ರಾ ಅಂತನೇ ಕರೆಸಿಕೊಳ್ಳುವ ನಟ ದುನಿಯಾ ವಿಜಯ್ ಡೋಂಟ್ ವರಿ ಬೇಬಿ ಚಿನ್ನಮ್ಮ ಎನ್ನುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಅಷ್ಟಕ್ಕೂ ವಿಜಯ್ ಈ ಮಾತು ಹೇಳಿರೋದು ಭೀಮ ಸಿನಿಮಾದ ವಿಶೇಷ ಹಾಡಿನಲ್ಲಿ ಬರೋ ಚಿನ್ನಮ್ಮನಿಗಾಗಿ ಅನ್ನೋದು ವಿಶೇಷ. ಭೀಮ ಚಿತ್ರದ ಮಗದೊಂದು ಗೀತೆ ರಿಲೀಸ್ ಆಗಿದೆ. ಶೋಕಗೀತೆಯಂತಿರೋ ಈ ಹಾಡಿನಲ್ಲಿ ಬರುವ ” ಅಕ್ಕಿಕಾಳು ಧರಿಸಿದೆ…ಕಣ್ಣ ನೀರಲ್ಲಿಯೇ ಬೇಯಿಸಿದೆ.” ಅನ್ನೋ ಸಾಲು ಚಿನ್ನಮ್ಮನ ಮೇಲಿನ ಭೀಮನ ಅಗಾಧ ಬಂಧನವನ್ನ ತಿಳಿಸುತ್ತೆ. ನಾಗಾರ್ಜುನ್ ಶರ್ಮಾ ಸಾಹಿತ್ಯ, ಚರಣ್ ರಾಜ್ ಸಂಗೀತವಿರುವ ಈ ಸಾಂಗ್ ಗಾನ ಮುತ್ತು ಕಂಠಸಿರಿಯಲ್ಲಿ ಹೃದಯ ತಟ್ಟುವಂತೆ ಮೂಡಿಬಂದಿದೆ.
ನಿಮಗೆಲ್ಲ ಗೊತ್ತಿರೋ ಹಾಗೇ ಭೀಮ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ. ಸಲಗ ಸಿನಿಮಾದ ನಂತರ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ವಿಜಯ್, ಭೀಮ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಫಸ್ಟ್ ಲುಕ್ ಟೀಸರ್ ಮೂಲಕವೇ ಭರವಸೆ ನೀಡಿದ್ದ ಭೀಮ ಹಾಡುಗಳ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಮಿಂಚಿನ ಸಂಚಲನ ಸೃಷ್ಟಿಸೋ ಸೂಚನೆ ಕೊಟ್ಟಿದ್ದಾರೆ. ಬ್ಯಾಡ್ಬಾಯ್ಸ್, ನೂರುಪಾಯಿ ಮಿಕ್ಸ್, ಐ ಲವ್ ಯೂ ಕಣೇ ಹಾಡುಗಳು ಯೂಟ್ಯೂಬ್ ಲೋಕದಲ್ಲಿ ಟ್ರೆಂಡಿಂಗ್ನಲ್ಲಿದ್ದು, ಇದೀಗ ಡೋಂಟ್ ವರಿ ಬೇಬಿ ಚಿನ್ನಮ್ಮ ಸಾಂಗ್ ನೋಡುಗರ ಗಮನ ಸೆಳೆಯುತ್ತಿದೆ.
ಇನ್ನೂ ಭೀಮ ತೆರೆಗಪ್ಪಳಿಸೋಕೆ ಸಜ್ಜಾಗಿದೆ. ಭೀಮನ ಆಗಮನಕ್ಕಾಗಿ ಕಾದು ಕುಂತವರಿಗೆ ಸಿಹಿಸುದ್ದಿಯೂ ಸಿಕ್ಕಿದೆ. ಇದೇ ಆಗಸ್ಟ್ 09 ರಂದು ಭೀಮನ ದರ್ಶನವಾಗಲಿದೆ. ಚಿತ್ರದಲ್ಲಿ ವಿಜಯ್ ಗ್ಯಾಂಗ್ಸ್ಟರ್ ಖದರ್ ತೋರಿಸಲಿದ್ದು, ಹೊಸ ರೀತಿಯ ಪಾತ್ರಗಳನ್ನು ಡಿಸೈನ್ ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೂ ವಿಜಯ್ ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ವಿಜಯ್ ಜೊತೆ ಅಶ್ವಿನಿ, ಕಲ್ಯಾಣಿ ರಾಜು, ಬ್ಲ್ಯಾಕ್ ಡ್ರ್ಯಾಗನ್ ಮಂಜು, ಗಿಲಿ ಗಿಲಿ ಚಂದ್ರು ಸೇರಿದಂತೆ ಹಲವರು ಮಿಂಚಿದ್ದಾರೆ. ವಿಜಯ್ ಕಥೆ-ಚಿತ್ರಕಥೆ ಬರೆದಿದ್ದು, ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದಲ್ಲಿ ಸಿನಿಮಾ ಅದ್ದೂರಿಯಾಗಿಯೇ ಮೂಡಿಬಂದಿದೆ. ಆಕ್ಷನ್ ಥ್ರಿಲ್ಲರ್ ಜಾನರ್ನಲ್ಲಿ ಖಡಕ್ಕಾಗಿ ಎಂಟ್ರಿಕೊಡ್ತಿರೋ ಭೀಮನ ಅಬ್ಬರ-ಆರ್ಭಟ ಹೇಗಿರಲಿದೆ ಜಸ್ಟ್ ವೇಯ್ಟ್ ಅಂಡ್ ವಾಚ್.