ಬೆಂಗಳೂರು: ಮಗು ಬೇಡ, ಮಗು ಬೇಕು ಎನ್ನುವ ವಿಚಾರಕ್ಕೆ ಚಂದನವನದ ಚೆಂದದ ಜೋಡಿ ನಡುವೆ ಬಿರುಕು ಬಿಟ್ಟಿದೆ. ಹೌದು ಬಿಗ್ ಬಾಸ್ ಸೀಸನ್ 5 ರ ಚಂದನ್ ಶೆಟ್ಟಿ ಮತ್ತು ನಿವೇದಿತಾಗೌಡ ಮಗುವಿನ ವಿಚಾರಕ್ಕೆ ಡಿವೋರ್ಸ್ ಗೆ ಮುಂದಾಗಿದ್ದಾರೆ. ಬಿಗ್ ಬಾಸ್ ಸೀಸನ್ 5 ರ ಜೋಡಿ ನಿವೇದಿತಾ ಹಾಗೂ ಚಂದನ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಇದೀಗ ಏಕಾಏಕಿ ಚಂದನ್ ಮತ್ತು ನಿವೇದಿತಾ ಗೌಡ ಡಿವೋರ್ಸ್ ಗೆ ಮುಂದಾಗಿದ್ದು, ಒಬ್ಬರೇ ವಕೀಲ ಮೂಲಕ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಗೆ ಅರ್ಜಿ ಅಲ್ಲಿಸಿದ್ದಾರೆ. ಮದುವೆಯಾಗಿ 4 ವರ್ಷದ ಬಳಿಕ ಚಂದನ್ ಮತ್ತು ನಿವೇದಿತಾ ಗೌಡ ಮಗುವಿನ ವಿಚಾರಕ್ಕೆ ಡಿವೋರ್ಸ್ ಗೆ ಮುಂದಾಗಿದ್ದು, ಪರಸ್ಪರ ಒಪ್ಪಿಗೆ ನೀಡಿಯೇ ಡಿವೋರ್ಸ್ ಗೆ ಮುಂದಾಗಿದ್ದಾರೆ.