ಕನ್ನಡದ ಖ್ಯಾತ ಱಪರ್ ಚಂದನ್ ಶೆಟ್ಟಿ ಹಾಗೂ ಗಿಚ್ಚಿಗಿಲಿಗಿಲಿ ಖ್ಯಾತಿಯ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಡಿವೋರ್ಸ್ಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಜೂನ್ 06ರಂದೇ ಫ್ಯಾಮಿಲಿ ಕೋರ್ಟ್ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್ ಕೇಸ್ ನಂ. MC 3388/2024.
ನಿನ್ನೆಯಷ್ಟೇ ಫ್ಯಾಮಿಲಿ ಕೋರ್ಟ್ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಅರ್ಜಿಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಜೊತೆ ಸಹಬಾಳ್ವೆ ನಿಲ್ಲಿಸಲು ಮುಂದಾಗಿದ್ದೇವೆ ಎಂದಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಕೋರಲಾಗಿದೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ಗೆ ಇಬ್ಬರೂ ಒಪ್ಪಿರುವುದರಿಂದ ಇಬ್ಬರಿಗೂ ಒಬ್ಬರೇ ಮಹಿಳಾ ವಕೀಲರಿದ್ದಾರೆ. ಡಿವೋರ್ಸ್ಗಾಗಿ ಫ್ಯಾಮಿಲಿ ಕೋರ್ಟ್ಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಜರಾಗಿದ್ದಾರೆ.