ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಎಷ್ಟು ರಾಯಲ್ಲೋ ಅಷ್ಟೇ ಸಿಂಪಲ್ ಅನ್ನೋದು ಇದೀಗ ಜಗತ್ತಿಗೆ ಗೊತ್ತಾಗಿದೆ. ಪುಷ್ಪ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬೆಳೆದು ನಿಂತಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರೋಡ್ ಸ್ಟೈಡ್ ಡಾಬಾದಲ್ಲಿ ಪತ್ನಿ ಜೊತೆ ಊಟ ಮಾಡಿ ತಾವೆಷ್ಟು ಸಿಂಪಲ್ ಅಂಡ್ ಹಂಬಲ್ ಅನ್ನೋದನ್ನ ಗ್ಲೋಬಲ್ ಜಗತ್ತಿಗೆ ತಿಳಿಸಿದ್ದಾರೆ. ಸದ್ಯ ಈ ಫೊಟೋ ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪುಷ್ಪ ರಾಜ್ ಸರಳತೆನಾ ನೋಡಿ ಅವರ ಫ್ಯಾನ್ಸ್ ಮಾತ್ರವಲ್ಲ ಗ್ಲೋಬಲ್ ಮಂದಿಯೇ ಕೊಂಡಾಡ್ತಿದ್ದಾರೆ. ಬನ್ನಿಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ಅಷ್ಟಕ್ಕೂ, ಈ ರೋಡ್ ಸೈಡ್ ಅಂಗಡಿ, ಹೋಟೆಲ್, ಡಾಬಾದಲ್ಲಿ ಊಟ ಮಾಡ್ತಿರುವವರ ಪೈಕಿ ಅಲ್ಲು ಏನು ಮೊದಲಲ್ಲ. ಈ ಹಿಂದೆ ಅನೇಕ ಸ್ಟಾರ್ ನಟರು ರಸ್ತೆಬದಿಯ ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಊಟ ಮಾಡಿ, ಸಣ್ಣ ವ್ಯಾಪಾರಿಗಳ ಉದ್ಯಮಕ್ಕೆ ಸಹಕಾರಿಯಾಗುವಂತೆ ನೋಡ್ಕೊಂಡಿದ್ದಾರೆ. ಸ್ಟಾರ್ ನಟರುಗಳು ಭೇಟಿ ಕೊಟ್ಟು ಹೋದ್ಮೇಲೆ ಹೋಟೆಲ್ ವ್ಯಾಪಾರ ಹೆಚ್ಚಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಅಲ್ಲು ಅರ್ಜುನ್ ಭೇಟಿಕೊಟ್ಟಿರುವ ಡಾಬಾಗೂ ಡಿಮ್ಯಾಂಡ್ ಕ್ರಿಯೇಟ್ ಆಗ್ಬೋದು. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ಬೋದು. ಯಾವುದಕ್ಕೂ ಕಾದು ನೋಡಬೇಕು..
ಸದ್ಯ ಅಲ್ಲು ಅರ್ಜುನ್ ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ ದಿ ರೂಲ್ ಗಾಗಿ ಇಡೀ ಪ್ಯಾನ್ ವರ್ಲ್ಡ್ ಕಣ್ಣರಳಿಸಿದೆ . ಸುಕುಮಾರ್ ನಿರ್ದೇಶನದಲ್ಲಿ ಅದ್ದೂರಿಯಾಗಿ ತಯಾರಾಗಿರೋ ಪುಷ್ಪ 2 ಇದೇ ಆಗಸ್ಟ್ 15 ರಂದು ರಿಲೀಸ್ ಆಗ್ತಿದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ್, ಸುನೀಲ್ ಸೇರಿದಂತೆ ಬಿಗ್ ಸ್ಟಾರ್ ಗಳ ದಂಡೇ ಪುಷ್ಪ-2 ಚಿತ್ರದಲ್ಲಿದೆ.