ಹಾಸ್ಯ ನಟ ಜಗ್ಗೇಶ್ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಇರ್ತಾರೆ. ಜಗ್ಗೇಶ್ ಅವರು ಭಾವನೆಗಳನ್ನ ಹಂಚಿಕೊಳ್ಳಲು. ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಪೋಸ್ಟ್ ಹಾಕಿ ಅವರ ಯೋಚನೆಗಳನ್ನ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತಾರೆ.
ಇತ್ತೀಚಿಗೆ ಎಲ್ಲೆಡೆ ಸುದ್ದಿಯಾಗಿ ಚರ್ಚೆಯಗುತ್ತಿರುವ ವಿಷ್ಯ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್. ಸಾಕಷ್ಟು ಚರ್ಚೆಯಾಗುತ್ತಿರುವ ಈ ಕೇಸ್ ಗೆ ಅನೇಕರು ಧ್ವನಿ ಎತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರು ಈ ಪ್ರಕರಣದ ಕುರಿತು ಮಾತನಾಡಿದ್ದಾರೆ.
ಹೆಣ್ಣುಕುಲ ದೇವರ ಅಮೋಘ ಸೃಷ್ಠಿ.. ದೇವರ ಪ್ರತಿರೂಪ ತನ್ನ ಸೃಷ್ಠಿಯ ಕಾರ್ಯ ಭೂಲೋಕದಲ್ಲಿ ಹೆಣ್ಣಿಂದ ಮಾಡಿಸುತ್ತಾನೆ. ಹೆಣ್ಣುಕುಲಕ್ಕೆ ವಿಶೇಷ ಶಕ್ತಿ ಇದೆ ಭ್ರಹ್ಮಾಂಡದಲ್ಲಿ. ಹೆಣ್ಣು ಮಗಳು ಮಡದಿ, ತಾಯಿ ರೂಪ ಹೊಂದಿ ಮನುಕುಲದ ಉದ್ಧಾರಕ್ಕೆ ಜನಿಸಿದ್ದಾಳೆ. ಹೆಣ್ಣು ಮಾತೃ ಸ್ವರೂಪಿಣಿ, ಅರ್ಥಾತ್ ದೈವ ಸ್ವರೂಪ. ಇಂತಹ ಹೆಣ್ಣುಕುಲದ ಶೋಷಣೆ, ಅಪಮಾನ, ಮಾನಭಂಗ ಮಾಡುವ ಯಾರು ಉದ್ಧಾರವಾದ ಇತಿಹಾಸವಿಲ್ಲಾ!.
ಯಾರು ಯಾವ ಮನೆಯಲ್ಲಿ ಹೆಣ್ಣನ್ನು ಅಕ್ಕ, ತಂಗಿ, ತಾಯಿ, ಮಡದಿ, ಮಗಳ ರೂಪದಲ್ಲಿ ಗೌರವಿಸುತ್ತಾನೋ ಆ ಮನುಷ್ಯನ ಜೀವನ ಸಂಕಷ್ಟವಿಲ್ಲದೆ ನಂದಗೋಕುಲ ಆಗುತ್ತದೆ. ಹಾಗು ಆ ಮನೆತನದಲ್ಲಿ ಆ ಲಕ್ಷ್ಮಿಯಾಗಿ ಪರಿವರ್ತನೆ ಆಗುತ್ತಾಳೆ. ಯಾರು ಇಂಥ ಶ್ರೇಷ್ಠ ಹೆಣ್ಣುಕುಲ ಅಪಮಾನ, ಅವಮಾನ, ಅತ್ಯಾಚಾರ ಮಾಡುತ್ತಾನೆ ಆ ಮನೆತನ ಸರ್ವನಾಶ ಆಗುತ್ತದೆ.. ಹೆಣ್ಣುಕುಲ ಗೌರವಿಸುವ ಶ್ರೇಷ್ಠ ದೇಶ ನಮ್ಮದು. ದೇಶಕ್ಕೂ ಮಾತೆ ಸ್ಥಾನ ನೀಡಿದವರು ನಮ್ಮ ಸನಾತನರು. ಇಂಥ ದೇಶವಾಸಿಗಳು ಹೆಣ್ಣುಕುಲ ಗೌರವಿಸಿ ಎಂದು ಅವರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.