ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡೆವಿಲ್ ಚಿತ್ರ ನಿರ್ದೇಶಕ ಪ್ರಕಾಶ್ಗೆ ನೋಟಿಸ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಪೊಲೀಸ್ ಸ್ಟೇಷನ್ಗೆ ಆಗಮಿಸಿದ ನಿರ್ದೇಶಕ ಮಿಲನ ಪ್ರಕಾಶ್ ವಿಚಾರಣೆಗೆ ಒಳಪಟ್ಟಿದ್ದಾರೆ.
ಡೆವಿಲ್ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡ್ತಿರುವ ಪ್ರಕಾಶ್ ಈಗ ದರ್ಶನ್ ಸಿಲುಕಿರುವ ಕೇಸ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ಡೆವಿಲ್ ಶೂಟಿಂಗ್ಗೆ ಸಿದ್ದವಾಗಿದ್ದ ದರ್ಶನ್ ಮೈಸೂರಿಗೆ ತೆರಳಿದ್ದರು. ಈ ವೇಳೆ ಚಿತ್ರತಂಡವನ್ನ ಭೇಟಿ ಮಾಡಿದ್ದ ಬಗ್ಗೆ ಮಾಹಿತಿ ಇರುವ ಕಾರಣಕ್ಕೆ ತನಿಖಾಧಿಕಾರಿಯಿಂದ ನಿರ್ದೇಶಕ ಪ್ರಕಾಶ್ರವರನ್ನು ವಿಚಾರಣೆಗೆ ಕರೆಯಲಾಗಿದೆ.
ಸದ್ಯ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಅವರ ಕಛೇರಿಯಲ್ಲಿ ಎಸಿಪಿ ಚಂದನ್ ಮುಂದೆ ಹಾಜರಾಗಿದ್ದಾರೆ. ಪ್ರಕರಣದ ನಂತ್ರ ಮೊದಲ ಬಾರಿಗೆ ಕಾಣಿಸಿದ ಪ್ರಕಾಶ್ ರನ್ನು ಯಾವ ಕಾರಣಕ್ಕೆ ಪೊಲೀಸರು ಕರೆಸಿರಬಹುದು ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ನಟ ಅರೆಸ್ಟ್ ಆದ ದಿನ ಡೆವಿಲ್ ಶೂಟಿಂಗ್ ಗಾಗಿ ಮೈಸೂರಿಗೆ ಹೋಗಿದ್ದ ದರ್ಶನ್ಗೆ ದುಶ್ಯಂತ್ ಫಿಲಂಸ್ ಬ್ಯಾನರ್ನ ಹೆಸರಲ್ಲಿ ಪ್ರಕಾಶ್ ರೂಮ್ ಬುಕ್ ಮಾಡಿದ್ದರು. ದರ್ಶನ್ ಮನೆಯಲ್ಲಿ ಸಿಕ್ಕ ಹಣಕ್ಕೂ ಡೆವಿಲ್ ಚಿತ್ರಕ್ಕೂ ಲಿಂಕ್ ಇದ್ಯಾ? ಸಂಭಾವನೆ ರೂಪದಲ್ಲಿ ದರ್ಶನ್ ಗೆ ಪ್ರಕಾಶ್ ಹಣ ಕೊಟ್ಟಿದ್ರ? ಸಡನ್ ಆಗಿ ಪ್ರಕಾಶ್ ಎಸಿಪಿ ಭೇಟಿಗೆ ಆಗಮಿಸಿದ್ದು, ಯಾವ ಕಾರಣಕ್ಕೆ ಬಂದ್ರು ಅನ್ನೋ ಕುತೂಹಲ ಮೂಡಿದೆ.