- ದರ್ಶನ್, ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ಸೂರಜ್ ವಿರುದ್ಧ ಕಿಡಿಕಾರಿದ ರಮ್ಯಾ
- ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವನ್ನ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸರ ಕಾರ್ಯಾಚರಣೆ ಹಾಗೂ ತನಿಖೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ಈ ಕಾರ್ಯಾಚರಣೆಗೆ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಟ ದರ್ಶನ್ ಅರೆಸ್ಟ್ ಆದ ಬಳಿಕ ನಟಿ ರಮ್ಯಾ ಅವರು ಕರ್ನಾಟಕ ಬಾಕ್ಸ್ಆಫೀಸ್ ಖಾತೆಯಿಂದ ಮಾಡಿದ್ದ ಟ್ವೀಟ್ವೊಂದನ್ನು ರೀ ಟ್ವೀಟ್ ಮಾಡಿದ್ದರು. ದರ್ಶನ್ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಆಗಬಹುದು ಎನ್ನುವ ಟ್ವೀಟ್ ಅನ್ನು ರಮ್ಯಾ ಅವರು ರೀ ಪೋಸ್ಟ್ ಮಾಡಿಕೊಂಡಿದ್ದರು.
ಇದಾದ ಬಳಿಕ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಮಾಜಿ ಸಿಎಂ ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ವಿರುದ್ಧ ಮತ್ತೆ ಕೆಂಡ ಕಾರಿದ್ದಾರೆ.
ಕಾನೂನನ್ನು ಉಲ್ಲಂಘಿಸಿ ಸುದ್ದಿಯಲ್ಲಿರುವವರು ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಅವರ ಹಿಂಸಾತ್ಮಕ ಕ್ರಿಯೆಗಳಿಗೆ ಬಲಿಯಾಗುತ್ತಿರುವುದು ಬಡವರು, ಮಹಿಳೆಯರು ಮತ್ತು ಮಕ್ಕಳು ಹಾಗೂ ಕರ್ನಾಟಕದ ಜನಸಾಮಾನ್ಯರು. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್. ವಿಚಾರಣೆಯನ್ನು ತ್ವರಿತಗೊಳಿಸಿದಾಗ ಮತ್ತು ಪ್ರಕರಣಗಳನ್ನು ಅವುಗಳ ತಾರ್ಕಿಕ ತೀರ್ಮಾನ ತೆಗೆದುಕೊಂಡಾಗ ನಿಜವಾಗಿಯೂ ನ್ಯಾಯವನ್ನು ಮಾಡಲಾಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ? ಎಂದು ನಟಿ ರಮ್ಯಾ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.