ಸಿಎಂ ಸಿದ್ದರಾಮಯ್ಯ ಸಂಪುಟದ ಮತ್ತೊಂದು ವಿಕೆಟ್ ಪತನವಾಗುತ್ತಾ..? ಶಾಸಕ ನಾಗೇಂದ್ರ ಬಳಿಕ ಮತ್ತೊಬ್ಬ ಸಚಿವ ರಾಜೀನಾಮೆ ಫಿಕ್ಸಾ.? ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ರಾಜ್ಯದ ಪ್ರಭಾವಿ ಮಂತ್ರಿ.? ಎಂಬ ವಿಷಯ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಪದತ್ಯಾಗದ ಬಗ್ಗೆ ಬಹಿರಂಗವಾಗಿ ಮತ್ತ್ತೊಬ್ಬ ಸಚಿವರು ಮಾತ್ನಾಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಸಿದ್ಧ ಎಂದು ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆಯಿಂದ ಸರಿಯಾಗುತ್ತೆ ಎನ್ನುದಾದ್ರೆ ನಾನು ರಾಜೀನಾಮೆಗೆ ಸಿದ್ಧ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದು ಜೀವಗಳಿಗೆ ಸಂಬಂಧಿಸಿದ್ದ ವಿಷಯ..ಸೂಕ್ಷ್ಮ ವಿಷಯವಾಗಿದೆ. ಇಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಅದನ್ನ ಬಿಟ್ಟು ನನ್ನ ರಾಜೀನಾಮೆಯೇ ಮುಖ್ಯವಾದ್ರೆ..ರಿಸೈನ್ ಗೆ ಸಿದ್ಧ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.