ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ ಪಾಲಿಗೆ ಇಂದೇ ನಿರ್ಣಾಯಕ ದಿನವಾಗಲಿದೆ. ಮುಡಾ ಕೇಸ್ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ಇಂದೇ ಇತ್ಯರ್ಥವಾಗುವ ಸಾಧ್ಯತೆ ಇದೆ. ಇಂದೇ ಹೈಕೋರ್ಟ್ನಲ್ಲಿ ವಿಚಾರಣೆ ನಡೆದು , ಇಂದೇ ಆದೇಶ ಆಗುವ ಸಾಧ್ಯತೆ ದಟ್ಟವಾಗಿದೆ. ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ.
ಇಂದೇ ವರದಿ ಸಲ್ಲಿಸಿ ಎಂದು ನ್ಯಾ.ನಾಗಪ್ರಸನ್ನ ಪೀಠ ತಿಳಿಸಿದೆ. ಮುಡಾ ಕೇಸ್ ಸಿಬಿಐಗೆ ವಹಿಸಿದ್ರೆ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗೊದು ಫಿಕ್ಸ್. ಈಗಾಗಲೇ ಲೋಕಾಯುಕ್ತ ಪೊಲೀಸರಿಂದ ಮಧ್ಯಂತರ ವರದಿಯನ್ನ ಹೈಕೋರ್ಟ್ಗೆ ಸಲ್ಲಿಸಿದ್ದಾರೆ ಲೋಕಾಯುಕ್ತ ಪೊಲೀಸರು. ಮುಡಾ ಕೇಸ್ ಸಿಬಿಐ ತನಿಖೆಗೆ ನೀಡುತ್ತಾ ಹೈಕೋರ್ಟ್ ಎಂಬುದನ್ನ ಕಾದು ನೋಡಬೇಕು. ಅಥವಾ ಲೋಕಾ ಪೊಲೀಸರೇ ತನಿಖೆ ನಡೆಸುವಂತೆ ಸೂಚಿಸುತ್ತಾ? ಎಂಬುದು ಇಂದು ತಿಳಿದು ಬರುತ್ತದೆ. ಒಟ್ಟಾರೆ ಸಿಎಂ ಸಿದ್ದರಾಮಯ್ಯ ಪಾಲಿಗೆ ಇಂದೇ ಬಿಗ್ ಡೇ.