ಸಾಮಾಜಿಕ ಜಾಲತಾಣಗಳಲ್ಲಿ ಸಮವಸ್ತ್ರದಲ್ಲಿ ವಿಡಿಯೋ ಹಾಗೂ ರೀಲ್ಸ್ಗಳನ್ನು ಮಾಡುವ ಪೊಲೀಸರಿಗೆ ಬಿಸಿ ಮುಟ್ಟಿಸಿರುವ ನಗರ ಪೊಲೀಸ್ ಆಯುಕ್ತರು, ಈ ರೀತಿ ಆಶಿಸ್ತು ತೋರಿದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಕೊಟ್ಟಿದ್ದಾರೆ. ಸುತ್ತೋಲೆ ಹೊರಡಿ ಸಿರುವ ಆಯುಕ್ತ ಬಿ.ದಯಾನಂದ್ ಅವರು, ಇಲಾಖೆಗೆ ಸಂಬಂಧಪಡದ ವಿಚಾರಗಳಲ್ಲಿ ಸಮವಸ್ತ್ರದಲ್ಲಿ ಆಶಿಸ್ತು ತೋರುವ ಸಿಬ್ಬಂದಿ ಮೇಲೆ ನಿಗಾವಹಿಸುವಂತೆ ಅಧಿಕಾರಿಗ ಳಿಗೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕರ್ತವ್ಯಕ್ಕೆ ಸಂಬಂಧಿಸದ ವಿಷಯಗಳಲ್ಲಿ ಪೊಲೀಸ್ ಸಮವಸ್ತ್ರ ದಲ್ಲಿ ಇರುವಂತಹ ಫೋಟೋಗಳು, ವಿಡಿಯೋಗಳು ಹಾಗೂ ರೀಲ್ಸ್ಗಳನ್ನು ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಹರಿಬಿಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಡವಳಿಕೆಯು ಪೊಲೀಸ್ ಇಲಾಖೆಯ ನಿಯಮಗಳು ಮತ್ತು ಪಾಲನೆಗಳಿಗೆ ವಿರುದ್ಧವಾಗಿದೆ ಮತ್ತು ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.