ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದ ಬಳಿಕ, ಇದೀಗ ಆತಿಥ್ಯ ವಹಿಸಲು ಸ್ಕಾಟ್ಲಂಡ್ ಮುಂದೆ ಬಂದಿದೆ. ಆ ದೇಶದ ರಾಜಧಾನಿ ಗ್ಲಾಸ್ ಗೋನಲ್ಲಿ ಕಾಮನ್ವೆಲ್ತ್ ಕ್ರೀಡಾ ಕೂಟ ನಡೆಯಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ತಿಳಿದುಬಂದಿದೆ. ಆತಿಥ್ಯದಿಂದ ಹಿಂದೆ ಸರಿದರೂ, ಕಾಮನ್ವೆಲ್ ಗೇಮ್ ಫೆಡರೇಶನ್ (ಸಿಜಿಎಫ್)ಗೆ ವಿಕ್ಟೋರಿಯಾ ಸರ್ಕಾರ 256 ಅಮೆರಿಕನ್ ಡಾಲರ್ ಪರಿಹಾರ ನೀಡಿದೆ. 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೇವಲ 10ರಿಂದ 13 ಕ್ರೀಡೆಗಳಷ್ಟೇ ಇರಲಿವೆ ಎಂದು ತಿಳಿದುಬಂದಿದೆ.