2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರಧಾನಿ ರೇಸ್ಗಿಳಿದರೆ ಬೆಂಬಲಿಸುವುದಾಗಿ ವಿರೋಧ ಪಕ್ಷದ ದೊಡ್ಡ ನಾಯಕರೊಬ್ಬರು ಆಫರ್ ನನಗೆ ಆಫರ್ ನೀಡಿದ್ದರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಜನತಾ ದಳ ನಾಯಕ ಮನೋಜ್ ಝಾ, ಬಿಜೆಪಿಯಲ್ಲೇ “ಸ್ಥಾನಕ್ಕಾಗಿ ಯುದ್ಧ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ 272 ಸ್ಥಾನಗಳ ಕೊರತೆ ಮತ್ತು ಟಿಡಿಪಿ ಮತ್ತು ಜೆಡಿ(ಯು) ನಂತಹ ಸಮ್ಮಿಶ್ರ ಪಾಲುದಾರರನ್ನು ಅವಲಂಬಿಸಿದೆ. “ಬಿಜೆಪಿಯಲ್ಲಿ ಸ್ಥಾನದ ಯುದ್ಧ ನಡೆಯುತ್ತಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ನೀವು ಅದರ ಫಲಿತಾಂಶಗಳನ್ನು ನೋಡಬಹುದು. ಬಿಜೆಪಿ ಈ ಬಾರಿ ಪ್ರಧಾನಿ ಮೋದಿಯವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆಯೇ? ಟೈಮ್ಲೈನ್ ಪರಿಶೀಲಿಸಿ, ಎನ್ಡಿಎ ಆಯ್ಕೆ ಮಾಡಿದೆ” ಎಂದು ಝಾ ಹೇಳಿರುವುದಾಗಿ ವರದಿಯಾಗಿದೆ.
2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತನಗೆ ಉನ್ನತ ಹುದ್ದೆಯ ಆಫರ್ ನೀಡಲಾಗಿತ್ತು. ನಾನು ಅದನ್ನು ನಯವಾಗಿ ತಿರಸ್ಕರಿಸಿದೆ ಎಂದು ಗಡ್ಕರಿ ಹೇಳಿದ್ದಾರೆ. ಗಡ್ಕರಿ ಅವರು ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದಿದ್ದರೂ, ಹಿರಿಯ ನಾಯಕರೊಬ್ಬರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಅವರು ಸುಳಿವು ನೀಡಿದರು. “ನಾನು ಯಾರನ್ನೂ ಹೆಸರಿಸಲು ಬಯಸುವುದಿಲ್ಲ, ಆದರೆ ಒಬ್ಬ ವ್ಯಕ್ತಿ ನನಗೆ ಹೇಳಿದರು, ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ.
ಅದಕ್ಕೆ ನಾನು ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು? ನನ್ನ ಜೀವನದಲ್ಲಿ ನಾನು ನನ್ನ ನಂಬಿಕೆ ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ. ನಾನು ಯಾವುದೇ ಹುದ್ದೆಗೆ ರಾಜಿ ಮಾಡಿಕೊಳ್ಳುವುದಿಲ್ಲ ಏಕೆಂದರೆ ನನ್ನ ನಂಬಿಕೆಯು ನನಗೆ ಅತ್ಯಂತ ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿರುವುದಾಗಿ ಹೇಳಿದ್ದಾರೆ.